Advertisement
ನಗರದ ಪೊಲೀಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರನ್ನು ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದ ನಿವಾಸಿಗಳಾದ ಭೀಮಣ್ಣ ಅಮ್ಮಣ್ಣ ಪೂಜಾರಿ (35), ಸಿದ್ಧಪ್ಪ ಸಿದ್ರಾಮಪ್ಪ ಡಿಗ್ಗಾವಿ(37), ಜೇವರ್ಗಿ ತಾಲೂಕಿನ ಮಂದೇವಾಲ್ ಗ್ರಾಮದ ಸಲಿಂ ಮಿಟ್ಟೆಸಾಬ್ ಶಿರಸಗಿ (22) ಮತ್ತು ಮಳ್ಳಿ ಗ್ರಾಮದ ಪರಸಯ್ಯ ಮಲ್ಲಿಕಾರ್ಜುನ ಗುತ್ತೇದಾರ (21) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
Related Articles
Advertisement
ಜಿಲ್ಲೆಯಲ್ಲಿ ಪಿಸ್ತೂಲ್ ಮಾರಾಟ ಜಾಲ ಸಕ್ರಿಯ?
ನಾಲ್ಕು ನಾಡ ಪಿಸ್ತೂಲ್ ಮತ್ತು ನಾಲ್ವರ ಬಂಧನದೊಂದಿಗೆ ಜಿಲ್ಲೆಯಲ್ಲಿ ಅಕ್ರಮ ಪಿಸ್ತೂಲ್‌ಗಳ ಮಾರಾಟ ನಡೆಯುತ್ತಿರುವ ವಿಷಯ ಬಯಲಾಗಿದೆ. ಇದಕ್ಕೂ ಮುನ್ನ ಹಲವಾರು ಬಾರಿ ಅಕ್ರಮ ಪಿಸ್ತೂಲ್‌ಗಳ ಮಾರಾಟ ಮತ್ತು ಬಂಧನ, ಅಫಜಲಪುರ, ಆಳಂದ, ಚಿಂಚೋಳಿ ಭಾಗದಲ್ಲಿ ನಡೆದ ಬಗ್ಗೆ ಗೊತ್ತಿರುವ ವಿಚಾರವೇ. ಆಗೆಲ್ಲ ಪ್ರಕರಣ ಎರಡು ದಿನ ಸದ್ದು ಮಾಡಿ ಸದ್ದಡಗುತ್ತಿತ್ತು. ಎಸ್ಪಿ ಇಶಾ ಪಂತ್ ಜಿಲ್ಲೆಗೆ ಬಂದ ಬಳಿಕ ಈ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ತಪಾಸಣೆ ನಡೆದಿತ್ತು. ಅಲ್ಲದೇ, ಅಕ್ರಮ ಪಿಸ್ತೂಲ್ ಜಾಲದ ಕುರಿತು ಸುಳಿವು ಮತ್ತು ಅರಿವು ಇರುವ ಕೆಲ ಪೇದೆಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಮೂರು ತಂಡಗಳನ್ನು ರಚಿಸಲಾಗಿತ್ತು. ಇದರಿಂದಾಗಿ ಜಾಲವನ್ನು ಬಹುಬೇಗನೆ ಕಂಡು ಹಿಡಿಯಲು ಸಾಧ್ಯವಾಗಿದೆ. ಅಲ್ಲದೇ, ಕೆಲ ವರ್ಷಗಳ ಹಿಂದೆ ಅಫಜಲಪುರದಲ್ಲಿ ಇಂತಹ ನಾಡ ಪಿಸ್ತೂಲ್‌ಗಳ ಮಾರಾಟ ಹೆಚ್ಚಾಗಿತ್ತು ಎಂದು ಕೇಳಿ ಬಂದಿತ್ತು. ಜಿಲ್ಲೆಯ ಜಾಲ ಪಕ್ಕದ ಮಹಾರಾಷ್ಟ್ರಕ್ಕೂ ಹಬ್ಬಿದ್ದು ಯುವಕರು, ಬಾಲಕರನ್ನು ಬಳಕೆ ಮಾಡಿಕೊಂಡು ಪಿಸ್ತೂಲ್‌ಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ಇತ್ತು ಎನ್ನವು ಅಂಶ ಗಡಿ ಗ್ರಾಮಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಜಾಲದ ವಹಿವಾಟಿನ ರೂವಾರಿಗಳನ್ನು ಗುರುತು ಮಾಡಿರಲಿಲ್ಲ. ಈಗ ಸೈಫ್‌ನ್‌ಸಾಬ್ ಪತ್ತೆಯಾಗಿದ್ದು, ಶೀಘ್ರವೇ ಇನ್ನಷ್ಟು ಮಾಹಿತಿ ದೊರೆಯಲಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಇಡೀ ಪ್ರಕರಣದಲ್ಲಿ ಆರೋಪಿತರನ್ನು ಅತ್ಯಂತ ಜಾಗರೂಕವಾಗಿ ಬಲೆಗೆ ಬೀಳಿಸಿದ ಅಫಜಲಪುರ ಠಾಣೆ ಪಿಎಸ್‌ಐ ಸುರೇಶಕುಮಾರ ಚವ್ಹಾಣ, ಯಡ್ರಾಮಿ ಪಿಎಸ್‌ಐ ಬಸವರಾಜ್ ಚಿತಕೋಟಿ, ಅಫಜಲಪುರ ಎಎಸ್‌ಐ ರಾಜಶೇಖರ, ಪೇದೆಗಳಾದ ಸಂತೋಷ, ಪಂಡಿತ, ಇಮಾಮ್, ಭಾಗಣ್ಣ, ಮಾಡಬೂಳ ಠಾಣೆಯ ಪೇದೆ ಆನಂದ ಅವರ ಕಾರ್ಯ ಶ್ಲಾಘನೀಯ. –ಇಶಾ ಪಂತ್, ಎಸಿ