Advertisement

ಹಳೇ ನೋಟುಗಳ ಬದಲಾವಣೆಗೆ ಯತ್ನಿಸಿದ ನಾಲ್ವರ ಬಂಧನ

11:20 AM Aug 13, 2017 | Team Udayavani |

ಬೆಂಗಳೂರು: ನಿಷೇಧಿತ ನೋಟುಗಳ ಬದಲಾವಣೆಗೆ ಯತ್ನಿಸಿದ ನಾಲ್ವರನ್ನು ಬಂಧಿಸಿರುವ ವಿವೇಕನಗರ ಪೊಲೀಸರು ಅಮಾನ್ಯಗೊಂಡ 500 ಹಾಗೂ 1000 ಮುಖಬೆಲೆಯ ಮೂರು ಕೋಟಿ ರೂ. ಮೌಲ್ಯದ ನೋಟು ವಶಪಡಿಸಿಕೊಂಡಿದ್ದಾರೆ. ಶಾಂತಿನಗರದ ನಿವಾಸಿ ಅಯ್ಯುಬ್‌ (50), ಅಜೀಬ್‌ (52), ಅಜೀಮ್‌ ಹಾಗೂ ಫ್ರೆಜರ್‌ಟೌನ್‌ನ ಅತಿಕ್‌ ಬಂಧಿತರು. ಈ ವೇಳೆ ಕೋಲ್ಕತ್ತಾಾ¤ ಮೂಲದ ಸೌರಭ್‌ ಜೈನ್‌ ಮತ್ತು ಮಹೇಶ್‌ ಪರಾರಿಯಾಗಿದ್ದಾರೆ. 

Advertisement

ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿರುವ ಆರೋಪಿಗಳೆಲ್ಲರೂ ಆ.11ರಂದು ರಾತ್ರಿ 11 ಗಂಟೆ ಸುಮಾರಿಗೆ ವಿವೇಕನಗರ ಠಾಣಾ ವ್ಯಾಪ್ತಿಯ ಶ್ರೀನಿವಾಗಿಲು ಸಿಗ್ನಲ್‌ ಬಳಿ ಪೊಲೀಸರು ತಪಾಸಣೆ ನಡೆಸುತ್ತಿರುವಾಗ ಮಾರುತಿ ಕಾರಿನಲ್ಲಿ ವೇಗವಾಗಿ ಬಂದಿದ್ದಾರೆ. ಇದನ್ನು ನೋಡಿದ ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದಾರೆ. 

ಆದರೆ, ಪೊಲೀಸರ ಮೇಲೆಯೇ ಕಾರು ಚಲಾಯಿಸಲು ಯತ್ನಿಸಿ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಿಂಬಾಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಸೌರಭ್‌ ಜೈನ್‌ ಮತ್ತು ಮಹೇಶ್‌ ಎಂಬ ಇಬ್ಬರು ಪರಾರಿಯಾಗಿದ್ದಾರೆ. 

ಕಾರು ತಪಾಸಣೆ ನಡೆಸಿದಾಗ ಎರಡು ಬ್ಯಾಗ್‌ಗಳಲ್ಲಿ ನಿಷೇಧಿತ ನೋಟುಗಳನ್ನು ತುಂಬಿರುವುದು ಪತ್ತೆಯಾಗಿದೆ. ಶೇ.25ರಷ್ಟು ಕಮಿಷನ್‌ ಆಸೆಗಾಗಿ ನೋಟುಗಳ ಬದಲಾವಣೆಗೆ ಯತ್ನಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ 420(ವಂಚನೆ) ಹಾಗೂ ದಿ ಸ್ಪೆಸಿಫೈಡ್‌ ಬ್ಯಾಂಕ್‌ ನೋಟ್ಸ್‌ ಕಾಯ್ದೆ7ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next