ಶಿವಮೊಗ್ಗ: ರೂಪಾಂತರಿತ ಕೋವಿಡ್-19 ಸೋಂಕು ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗಲೇ ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದ ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್-19 ಪಾಸಿಟಿವ್ ದೃಢವಾಗಿದೆ. ಈ ನಾಲ್ವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಬ್ರಿಟನ್ ನಲ್ಲಿ ಈಗಾಗಲೇ ಕಂಡುಬಂದಿರುವ ರೂಪಾಂತರಿತ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬ ದೃಢೀಕರಣ ಪಡೆಯಲು ಇವರ ಮಾದರಿಯನ್ನು ಪುಣೆಯ ವಿಶೇಷ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಸಿಟಿವ್ ಬಂದ ಈ ನಾಲ್ವರಲ್ಲಿ ರೂಪಾಂತರಿ ಕೋವಿಡ್ ಇರುವಿಕೆಯ ಬಗ್ಗೆ ಪುಣೆ ನ್ಯಾಷನಲ್ ವೈರಸ್ ಇನ್ಸ್ಟಿಟ್ಯೂಟ್ ನಿಂದ ವರದಿ ಬಂದ ನಂತರ ಖಚಿತಗೊಳ್ಳಲಿದೆ.
ಆದರೆ ಸರ್ಕಾರದ ಮೂಲಗಳು ಇದುವರೆಗೆ ಈ ಬಗ್ಗೆ ಖಚಿತಪಡಿಸಿಲ್ಲ. ಬ್ರಿಟನ್ ನಿಂದ ಬಂದವರಿಗೆ ಸೋಂಕು ಬಂದಿದೆಯೋ ಇಲ್ಲವೋ ಎಂಬುದು ನಾನು ಹೇಳಿದ ಬಳಿಕವಷ್ಟೇ ಅಧಿಕೃತ. ಬ್ರಿಟನ್ ನಿಂದ ಬಂದವರ ಸೋಂಕು ಪರೀಕ್ಷೆಯ ವರದಿ ನಾಳೆ ಸಂಜೆ ವೇಳೆಗೆ ಬರಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಕೋವಿಡ್ ರೂಪಾಂತರ ಭೀತಿ: ಇಂಗ್ಲೆಂಡ್ ನಿಂದ ಬಂದ 22 ಜನರಿಗೆ ಸೋಂಕು ದೃಢ