Advertisement

Accident: ಶಿರ್ಡಿಗೆ ತೆರಳುತ್ತಿದ್ದ ಕರ್ನಾಟಕದ ನಾಲ್ವರು ಅಪಘಾತದಲ್ಲಿ ದುರ್ಮರಣ

11:50 PM Dec 27, 2023 | Team Udayavani |

ಮುಂಬಯಿ: ಮಹಾರಾಷ್ಟ್ರದ ಕರ್ಮಲಾ-ಅಹ್ಮದ್‌ನಗರ್‌ ರಸ್ತೆಯಲ್ಲಿ ಎಸ್‌ಯುವಿ ಮತ್ತು ಕಂಟೈನರ್‌ ಟ್ರಕ್‌ ಒಂದರ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕರ್ನಾಟಕದ ನಾಲ್ವರು ಮೃತಪಟ್ಟಿದ್ದಾರೆ. ಅಲ್ಲದೇ, ಒಂದು ಮಗು ಸೇರಿದಂತೆ ಇತರೆ 6 ಮಂದಿ ಗಾಯಗೊಂಡಿರುವುದು ವರದಿಯಾಗಿದೆ.

Advertisement

ಮಹಾರಾಷ್ಟ್ರದ ಅಹ್ಮದಾನಗರ್‌ ಜಿಲ್ಲೆಯಲ್ಲಿರುವ ಶಿರಡಿ ಸಾಯಿಬಾಬಾ ಕ್ಷೇತ್ರಕ್ಕೆಂದು ಗುಲ್ಬರ್ಗದಿಂದ ಸೋಲಾಪುರ ಮಾರ್ಗವಾಗಿ ತೆರಳುತ್ತಿದ್ದ ಎಸ್‌ಯುವಿ ಬೆಳಗ್ಗೆ 6 ಗಂಟೆ ಜಾವದಲ್ಲಿ ಎದುರಿಗೆ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಶಾರದಾ ಹಿರೇಮಠ್‌, ಜೆಮಿ ದೀಪಕ್‌ ಹಿರೇಮಠ್‌, ಶ್ರೀಶಾಲ್‌ ಚಂದಗ ಕುಂಬಾರ್‌ ಹಾಗೂ ಶಶಿಕಲಾ ಎಂಬವರು ಮೃತಪಟ್ಟಿದ್ದಾರೆ. 8 ತಿಂಗಳ ಮಗು ಸೇರಿದಂತೆ 6 ಮಂದಿ ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next