Advertisement

ಮೃತರಲ್ಲಿ ಬೆಳ್ತಂಗಡಿಯ ನಾಲ್ವರು

04:04 PM Jan 14, 2018 | |

ಬೆಳ್ತಂಗಡಿ: ಹಾಸನದ ಶಾಂತಿಗ್ರಾಮದಲ್ಲಿ ಶನಿವಾರ ಮುಂಜಾನೆ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ಹಳ್ಳಕ್ಕೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಏಳು ಮಂದಿಯ ಪೈಕಿ ನಾಲ್ವರು ಬೆಳ್ತಂಗಡಿ ತಾಲೂಕಿನವರು. ಇವರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರು.

Advertisement

ನೆರಿಯಾ ಗ್ರಾಮದ ಗಂಡಿಬಾಗಿಲು ದೇವಗಿರಿ ಪುತ್ತೋಟ್‌ ಪೊರವಿಲ್‌ ನಿವಾಸಿಗಳಾದ ಜಾರ್ಜ್‌ ಯಾನೆ ಬೇಬಿ ಮತ್ತು ಸುಜಾ ದಂಪತಿಯ ಪುತ್ರ ಬಿಜೋ ಜಾರ್ಜ್‌ (27), ವಿನು ಅವರ ಪತ್ನಿ ಸೋನಿಯಾ (27), ದೇವಸ್ಯ ಅವರ ಪುತ್ರಿ ಡಯಾನಾ ಪಿ.ಡಿ. (20) ಹಾಗೂ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಬಳಿಯ ಸೌಭಾಗ್ಯ ನಿಲಯ ನಿವಾಸಿ ಸಿಂಡಿಕೇಟ್‌ ಬ್ಯಾಂಕ್‌ನ ಉದ್ಯೋಗಿಯಾಗಿದ್ದ ದಿ| ಎಂ. ರಾಮದಾಸ್‌ ಪ್ರಭು ಅವರ ಏಕೈಕ ಪುತ್ರ ಎಂ. ರಾಕೇಶ್‌ ಪ್ರಭು (26) ಮೃತಪಟ್ಟವರು. ಮೃತ ಸೋನಿಯಾ ಅವರ ಪತಿ ವಿನು ಥಾಮಸ್‌ (32)  ಗಂಭೀರ ಗಾಯಗೊಂಡಿದ್ದಾರೆ. ಅವರ ತಲೆ, ಕೈಗೆ ತೀವ್ರ ಗಾಯವಾಗಿದೆ; ಕಿಡ್ನಿಗೂ ಏಟು ಬಿದ್ದಿದೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಬ್ಬಕ್ಕೆ ಬರುತ್ತಿದ್ದವರು: ನೆರಿಯ ಗ್ರಾಮದ ಗಂಡಿ ಬಾಗಿಲಿನ ದೇವಗಿರಿಯ ಸೈಂಟ್‌ ಥಾಮಸ್‌ ಚರ್ಚ್‌ನಲ್ಲಿ ಶನಿವಾರ ಹಾಗೂ ರವಿವಾರ ವಾರ್ಷಿಕ ಹಬ್ಬ ಆಯೋಜನೆ ಯಾಗಿತ್ತು. ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವರು ಬೆಂಗಳೂರಿ
ನಿಂದ ಊರಿಗೆ ಬರುತ್ತಿರುವಾಗ ಅವಘಡ ಸಂಭವಿಸಿದೆ.

ಗಾಢ ಮೌನ: ಅಷ್ಟೇನೂ ಸಿರಿತನದ ಕುಟುಂಬವಲ್ಲದ ಇವರ ಅಗಲುವಿಕೆ ಊರಿನವರಲ್ಲೂ ವಿಷಾದ ಛಾಯೆ ಮೂಡಿಸಿದೆ. ಸಾಧಾರಣ ಹಂಚಿನ ಮನೆ ಹೊಂದಿರುವ ಇವರ ಮನೆಗೆ ಜನ ಆಗಮಿಸುತ್ತಿದ್ದರೂ ಮನೆಯವರಿಗೆ ತಡವಾಗಿ ವಿಷಯ ತಿಳಿಸಲಾಗಿದೆ. ಡಯಾನಾ, ಬಿಜೋ ಜಾರ್ಜ್‌ ಹಾಗೂ ಗಾಯಾಳು ವಿನು ಥಾಮಸ್‌ ಅವರು ಒಂದೇ ಕುಟುಂಬಕ್ಕೆ ಸೇರಿ ದವರಾಗಿದ್ದು ಈ ಮನೆಗಳ ಪರಿಸರವೇ ಅಗಾಧ ಮೌನದಿಂದ ಆವರಿಸಿದೆ. ಊರಿನಲ್ಲಿ ವಾರ್ಷಿಕ ಜಾತ್ರೆಯ ಸಂಭ್ರಮ ಮರೆ ಯಾಗಿದೆ. ಸಂಬಂಧಿಕರ ಮುಖದಲ್ಲಿ ನೋವಿನ ಕಳೆಯಿತ್ತು. ಬಂಧುಗಳು ಅಳುನುಂಗುತ್ತಿದ್ದರು. ಸ್ನೇಹಿತರು ಕಣ್ಣೀರು ಹಾಕುತ್ತಿದ್ದರು. ರವಿವಾರ ಅಂತ್ಯ ಸಂಸ್ಕಾರ ನಡೆಯಲಿದೆ. ಶಾಸಕ ಕೆ. ವಸಂತ ಬಂಗೇರ, ಜಿ.ಪಂ. ಸದಸ್ಯ ನಮಿತಾ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮೊದಲಾ ದವರು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next