Advertisement

ಬೀದರ್ ನಲ್ಲಿ ಮತ್ತೆ ನಾಲ್ವರಿಗೆ ಸೋಂಕು: ಜಿಲ್ಲೆಯಲ್ಲಿ ಒಟ್ಟು 46 ಸೋಂಕಿತರು

01:13 PM May 14, 2020 | keerthan |

ಬೀದರ್: ದೆಹಲಿಯ ಜಮಾತ್ ತಬ್ಲಿಘಿ ಕೋವಿಡ್-19 ಕಂಟಕದಿಂದ ತತ್ತರಿಸಿರುವ ಗಡಿ ನಾಡು ಬೀದರ್ ಗೆ ಈಗ ಮುಂಬೈ‌ ಕಂಟಕ ಶುರುವಾಗಿದೆ. ಗುರುವಾರ ಮುಂಬೈನಿಂದ ಬಂದಿರುವ ಮಹಿಳೆ ಸೇರಿ 4 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 46ಕ್ಕೆ ಏರಿಕೆಯಾಗಿದೆ.

Advertisement

ಸಧ್ಯ ಬೀದರ ನಗರದ ಒಂದು ಭಾಗಕಷ್ಟೇ ಸೀಮಿತವಾಗಿದ್ದ ಕೋವಿಡ್-19 ತನ್ನ ಕೆನ್ನಾಲಿಗೆ ಚಾಚಿದ್ದು, ಈಗ ಹುಮನಾಬಾದಗೂ ಪಸರಿಸಿದೆ.  ಒಟ್ಟು ನಾಲ್ವರು ಹೊಸ ಸೋಂಕಿತರಲ್ಲಿ ಮುಂಬೈನಿಂದ ಹುಮನಾಬಾದಗೆ ಆಗಮಿಸಿರುವ ಮಹಿಳೆ ಸಹ ಸೇರಿದ್ದಾಳೆ. ಇನ್ನೂ ಮೂವರಿಗೆ ಬೀದರನ ಓಲ್ಡ್ ಸಿಟಿಯ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ ಸೋಂಕು ಒಕ್ಕರಿಸಿರುವ ಬಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೇಲ್ತ್ ಬುಲೇಟಿನ್ ದೃಢಪಡಿಸಿದೆ.

45 ವರ್ಷದ ಪಿ-978, 32 ವರ್ಷದ ಪಿ- 979, 29 ವರ್ಷದ ಪಿ- 980 ಮತ್ತು 25 ವರ್ಷದ ಪಿ-981 ಸಂಖ್ಯೆಯ ರೋಗಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next