Advertisement

ಪಿಎಂ ಮೋದಿ ಕಠಿನ ಹೃದಯಿ ಅಲ್ಲ; ಕಾಂಗ್ರೆಸ್‌ ಮಾಜಿ ನಾಯಕ ಗುಲಾಂ ನಬಿ

12:27 AM Aug 30, 2022 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಠಿನ ಹೃದಯಿ ಎಂದು ನಾನು ಭಾವಿಸಿದ್ದೆ. ಆದರೆ, ಅವರಲ್ಲಿ ಮಾನವೀಯ ಕಳಕಳಿಯಿದೆ ಎಂಬುದು ನನಗೆ ಗೊತ್ತಾಯಿತು.

Advertisement

ಹೀಗೆಂದು ಹೇಳಿರುವುದು ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್‌.

ಹೊಸದಿಲ್ಲಿಯಲ್ಲಿ ಸೋಮವಾರ ಮಾತನಾಡಿದ ಅವರು, “ಪ್ರಧಾನಿ ಯವರು ಕಳೆದ ವರ್ಷ ರಾಜ್ಯಸಭೆ ಯಲ್ಲಿ ಕಣ್ಣೀರು ಹಾಕಿದ್ದು ನನ್ನ ಸದ ಸ್ಯತ್ವದ ಅವಧಿ ಮುಕ್ತಾಯಗೊಂಡದ್ದಕ್ಕೆ ಅಲ್ಲ. 2006ರಲ್ಲಿ ಕಾಶ್ಮೀರದಲ್ಲಿ ಗುಜರಾತ್‌ನ ಪ್ರವಾಸಿಗರು ಗ್ರೆನೇಡ್‌ ದಾಳಿಯಲ್ಲಿ ಅಸುನೀಗಿದ ಸಂದರ್ಭ ನಾನು ಸಿಎಂ ಆಗಿದ್ದೆ. ಆಗ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದರು. ಅಂದಿನ ಘಟನೆಯನ್ನು ನೆನಪಿಸಿಕೊಂಡು ಅವರು ಕಣ್ಣೀರು ಹಾಕಿದ್ದರು. ಇಂಥ ಘಟನೆಗಳನ್ನೆಲ್ಲ ಮೋದಿ ಕ್ಯಾರೇ ಮಾಡುವುದಿಲ್ಲ. ಅವರೊಬ್ಬ ಕಠಿನ ಹೃದಯಿ ಎಂದು ನಾನು ಭಾವಿಸಿದ್ದೆ. ಆದರೆ ಅಂದು ಅವರ ಮಾನವೀಯ ಕಾಳಜಿಯನ್ನು ನಾನು ನೋಡಿದೆ ಎಂದಿದ್ದಾರೆ.

ಕಳೆದ ವಾರ ಆಜಾದ್‌ ಕಾಂಗ್ರೆಸ್‌ ತೊರೆದ ಕೂಡಲೇ ಪ್ರಧಾನಿ ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೀಡಿಯೋ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಮತ್ತೆ ವಾಗ್ಧಾಳಿ
ಇದೇ ವೇಳೆ ಕಾಂಗ್ರೆಸ್‌ ವಿರುದ್ಧದ ವಾಗ್ಧಾಳಿ ಮುಂದುವರಿಸಿದ ಆಜಾದ್‌, ಅನಾರೋಗ್ಯಕ್ಕೆ ಈಡಾಗಿರುವ ಕಾಂಗ್ರೆಸ್‌ ವೈದ್ಯರ ಬದಲಾಗಿ, ಕಾಂಪೌಂಡರ್‌ಗಳಿಂದ ಔಷಧ ಸ್ವೀಕರಿಸುತ್ತಿದೆ. ಕಾಂಗ್ರೆಸ್‌ ಮುಖಂಡರು ವಿಶೇಷವಾಗಿ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ರಾಜಕೀಯದ ಜ್ಞಾನವೇ ಇಲ್ಲ ಎಂದರು. ಆದರೆ ವ್ಯಕ್ತಿಗತವಾಗಿ ರಾಹುಲ್‌ ಒಳ್ಳೆಯವರೇ ಎಂದು ಹೇಳಲು ಆಜಾದ್‌ ಮರೆಯಲಿಲ್ಲ. ರಾಹುಲ್‌ ಗಾಂಧಿ ಪ್ರತೀ ವಿಚಾರಕ್ಕೂ ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಸಿಡಬ್ಲ್ಯುಸಿ ಇತ್ತೀಚಿನ ವರ್ಷಗಳಲ್ಲಿ ಅರ್ಥ ಕಳೆದುಕೊಂಡಿದೆ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅವಧಿಯಲ್ಲಿ ಇದ್ದ ಸಲ ಹೆಗಳನ್ನು ಕೇಳುವ ಪ್ರಕ್ರಿಯೆಯೇ ಈಗ ಪಕ್ಷದಲ್ಲಿಲ್ಲ ಎಂದು ಆಜಾದ್‌ ವಿಷಾದಿಸಿದ್ದಾರೆ. ಉತ್ತಮ ನಾಯಕರನ್ನು ಸಿದ್ಧಗೊಳಿ ಸಬೇಕು ಎಂಬ ಇಚ್ಛೆ ಕಾಂಗ್ರೆಸ್‌ಗಿಲ್ಲ ಎಂದು ದೂರಿದ್ದಾರೆ.
ಬಿಜೆಪಿ ಸೇರುವುದಿಲ್ಲ

Advertisement

ಇದೇ ವೇಳೆ ತಾವು ಬಿಜೆಪಿ ಸೇರುವುದಿಲ್ಲ. ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಒಲವಿದೆ ಎಂದಿದ್ದಾರೆ ಆಜಾದ್‌.

ಮತ್ತೆ 4 ಮಂದಿ ರಾಜೀನಾಮೆ
ಗುಲಾಂ ನಬಿಗೆ ಬೆಂಬಲ ಸೂಚಿಸಿ ಜಮ್ಮು, ಕಾಶ್ಮೀರದ ಕಾಂಗ್ರೆಸ್‌ನ ಇನ್ನೂ ನಾಲ್ವರು ಮುಖಂಡರು, ಅಪ್ನಿ ಪಾರ್ಟಿಯ 12 ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next