Advertisement
ಹೌದು, 2022ರಲ್ಲಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಈ ನಾಲ್ಕು ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಸಿಗುವುದು 50. ಈ ವಾರ (ಏ.22) ಬಿಡುಗಡೆಯಾಗುತ್ತಿರುವ ಒಂದು ಸಿನಿಮಾ ಹಾಗೂ ಮುಂದಿನ ವಾರ (ಏ.29) ಬಿಡುಗಡೆಯಾಗುತ್ತಿರುವ ಸಿನಿಮಾಗಳನ್ನು ಸೇರಿಸಿದರೆ ಸಂಖ್ಯೆ 50 ದಾಟುತ್ತದೆ.
Related Articles
Advertisement
ಹೊಸಬರ ಮೆರವಣಿಗೆ: ಮುಂದಿನ ಎಂಟು ತಿಂಗಳಿನಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದಕ್ಕೆ ಕಾರಣ ಸೆನ್ಸಾರ್ ಆಗಿ ಬಿಡುಗಡೆಗೆ ಕಾದು ಕುಳಿತಿರುವ ಸಿನಿಮಾಗಳು. ಕೋವಿಡ್ ಹಾಗೂ ಸ್ಟಾರ್‌ಗಳ ಸಿನಿಮಾ ಭಯದಿಂದ ಸೆನ್ಸಾರ್ ಆಗಿರುವ ಅನೇಕ ಸಿನಿಮಾಗಳು ಮೇ ನಂತರ ಬಿಡುಗಡೆಯಾಗಲಿವೆ. “ಆರ್‌ಆರ್‌ಆರ್’, “ಕೆಜಿಎಫ್-2′ ಎಂದು ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಾ ಬಂದ ಸಿನಿಮಾಗಳು ಈಗ ಬಿಡುಗಡೆಯಾಗಲಿವೆ. ಸ್ಟಾರ್ ಸಿನಿಮಾ ಬರುವ ವಾರದಲ್ಲಿ ರಿಲೀಸ್ ಸಂಖ್ಯೆ ಕಡಿಮೆಯಾಗಬಹುದೇ ಹೊರತು ಮಿಕ್ಕಂತೆ ಮುಂದಿನ ದಿನಗಳಲ್ಲಿ ಹೊಸಬರ ಮೆರವಣಿಗೆ ಜೋರಾಗಿಯೇ ಸಾಗಲಿದೆ.
ಭರವಸೆ ಮೂಡಿಸಿದ ವರ್ಷಾರಂಭ: ಕನ್ನಡ ಚಿತ್ರರಂಗಕ್ಕೆ ಈ ವರ್ಷಾರಂಭ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಬಿಡುಗಡೆಯಾದ ಎಲ್ಲಾ ಚಿತ್ರಗಳು ಗೆಲ್ಲದಿದ್ದರೂ ಗೆದ್ದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿವೆ. “ಲವ್ ಮಾಕ್ಟೇಲ್-2′, “ಏಕ್‌ಲವ್ಯ’, “ಓಲ್ಡ್ ಮಾಂಕ್’, “ಜೇಮ್ಸ್’ … ಹೀಗೆ ಅನೇಕ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಇನ್ನು, ಇತ್ತೀಚೆಗೆ ಬಿಡುಗಡೆಯಾದ “ಕೆಜಿಎಫ್-2′ ಇಡೀ ವಿಶ್ವವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದೆ. ಜೊತೆಗೆ ಮತ್ತಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ “ಕೆಜಿಎಫ್-2′ ದಾರಿ ಮಾಡಿಕೊಟ್ಟಿವೆ.
ಮತ್ತಷ್ಟು ಸಿನಿಮಾಗಳ ಮೇಲೆ ನಿರೀಕ್ಷೆ: ಈ ತಿಂಗಳಾಂತ್ಯದಿಂದ ಬಿಡುಗಡೆಯಾಗುತ್ತಿರುವ ಅನೇಕ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ. “ಶೋಕಿವಾಲ’, “ಅವತಾರ್ ಪುರುಷ’, “ಟಕ್ಕರ್’, “ತೋತಾಪುರಿ’, “ಕಸ್ತೂರಿ ಮಹಲ್’, “ಮೇಲೊಬ್ಬ ಮಾಯಾವಿ’, “ತೂತು ಮಡಿಕೆ’, “ಖಾಸಗಿ ಪುಟಗಳು’, “ಚೇಸ್’ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳು ನಾನಾ ಕಾರಣಗಳಿಗಾಗಿ ನಿರೀಕ್ಷೆ ಹುಟ್ಟಿಸಿವೆ.
ರವಿಪ್ರಕಾಶ್ ರೈ