ರತ್ನಗಿರಿ : ಅಸಹ್ಯಕರ ಮತ್ತು ಆಘಾತಕಾರಿ ಘಟನೆಯೊಂದರಲ್ಲಿ ಬಂಗಾಳ ಮಾನಿಟರ್ ಹಲ್ಲಿಯ (ಉಡ) ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಗೋಥಾಣೆ ಗ್ರಾಮದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳ ಬೇಟೆಗಾರರು ಎಂದು ಗುರುತಿಸಲಾದ ನಾಲ್ವರು ಆರೋಪಿಗಳು ಘೋರ ಅಪರಾಧ ಎಸಗಿದ್ದಾರೆ.
ಆರೋಪಿಗಳನ್ನು ಸಂದೀಪ್ ತುಕಾರಾಂ ಪವಾರ್, ಮಂಗೇಶ್ ಕಮ್ಟೇಕರ್, ಅಕ್ಷಯ್ ಕಮ್ಟೇಕರ್ ಮತ್ತು ರಮೇಶ್ ಘಾಗ್ ಎಂದು ಗುರುತಿಸಲಾಗಿದೆ.
ಗೋಥಾಣೆಯ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ವಲಯಕ್ಕೆ ಪ್ರವೇಶಿಸಿ ಹೇಯ ಕೃತ್ಯ ಎಸಗಿದ್ದು, ಕಾಮಾಂಧರು ವಿಕೃತಿಯನ್ನು ಮೊಬೈಲ್ ಗಳಲ್ಲಿ ಚಿತ್ರೀಕರಿಸಿ ಕೊಂಡಿದ್ದರು ಎಂದು ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳ ವಿರುದ್ಧ ವನ್ಯಜೀವಿ ರಕ್ಷಣೆ ಕಾಯ್ದೆ, 1972 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಗಾಳದ ಮಾನಿಟರ್ ಹಲ್ಲಿ(ಉಡ) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಮೀಸಲು ಜಾತಿಯಾಗಿದ್ದು, ಒಂದು ವೇಳೆ ದೋಷಿಗಳೆಂದು ಸಾಬೀತಾದರೆ, ನಾಲ್ವರು ಆರೋಪಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.
ಬಂಗಾಳ ಮಾನಿಟರ್ ಹಲ್ಲಿಯನ್ನು ಮಾಂಸಕ್ಕಾಗಿ ಬೇಟೆಯಾಡಲಾಗುತ್ತದೆ, ಅದು ಗರಿಷ್ಠ 7 ಕೆಜಿ ಯಷ್ಟು ಬೆಳೆಯುತ್ತದೆ.