Advertisement

ನಾಲ್ವರು ವಕೀಲರು ಸೇರಿ ಐವರ ಸೆರೆ

09:56 AM Oct 28, 2021 | Team Udayavani |

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಟಿ.ಕೆ.ಶ್ರೀ ನಿವಾಸ ನಾಯ್ಡು ಅವರ ಐಷಾರಾಮಿ ರೇಂಜ್‌ ರೋವರ್‌ ಕಾರಿಗೆ ಬೆಂಕಿ ಇಟ್ಟಿದ್ದ ನಾಲ್ವರು ವಕೀಲರು ಸೇರಿ ಐವರು ಸದಾಶಿವನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಮತ್ತೂಂದೆಡೆ ಘಟನೆ ಸಂಬಂಧ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಯಲಚೇನಹಳ್ಳಿ ನಿವಾಸಿ ಅಭಿನಂದನ್‌(30),
ಮಾಗಡಿ ರಸ್ತೆ ಕೆ.ಪಿ.ಅಗ್ರಹಾರ ನಿವಾಸಿ ಶಶಾಂಕ್‌(28), ರಾಕೇಶ್‌ (27) ತಿಲಕನಗರದ ನಿರ್ಮಲ್‌(26), ಅರಕೆರೆ ನಿವಾಸಿ ಗಣೇಶ್‌(28) ಬಂಧಿತರು.
ಪ್ರಮುಖ ಆರೋಪಿ ಜಯಕರ್ನಾಟಕ ಸಂಘಟನೆ ಕಾನೂನು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಗಣೇಶ್‌ ಕಾರು ಚಾಲಕನಾಗಿದ್ದು, ಇತರೆ ಆರೋಪಿಗಳು ವಕೀಲರಾಗಿದ್ದು, ನಾರಾಯಣಸ್ವಾಮಿಯ ಜ್ಯೂನಿಯರ್‌ಗಳು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ:- ಮದ್ಯ ಅಂಗಡಿ ತೆರವಿಗೆ ಒತ್ತಾಯ

ಆರೋಪಿಗಳು ಅ.19ರಂದು ರಾತ್ರಿ 10 ಗಂಟೆ ಸುಮಾರಿಗೆ ಸದಾಶಿವನಗರ ಸಪ್ತಗಿರಿ ಅಪಾರ್ಟ್‌ಮೆಂಟ್‌ ನಿವಾಸಿ ಶ್ರೀನಿವಾಸ ನಾಯ್ಡು ಅವರ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು. ನಾರಾಯಣಸ್ವಾಮಿ ಮತ್ತು ಶ್ರೀನಿವಾಸ ನಾಯ್ಡು ಈ ಮೊದಲು ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಪ್ತರಾಗಿದ್ದರು. ರಿಯಲ್‌
ಎಸ್ಟೇಟ್‌, ಡೆವಲಪರ್ಸ್‌ಗಳಾಗಿದ್ದಾರೆ. ಮುತ್ತಪ್ಪ ರೈ ನಿಧನದ ಬಳಿಕ ಇಬ್ಬರು ವೈಯಕ್ತಿಕ ಹಾಗೂ ವ್ಯವಹಾರದ ವಿಚಾರದ ಕಾರಣಕ್ಕೆ ಪರಸ್ಪರ ದ್ವೇಷಿಸುತ್ತಿದ್ದರು. ನಾರಾಯಣಸ್ವಾಮಿ ಜಯ ಕರ್ನಾಟಕ ಸಂಘಟನೆ ಕಾನೂನು ಘಟಕದ ಮುಖ್ಯಸ್ಥರಾಗಿದ್ದು, ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಸಂಬಂಧಿಸಿದ ಕಾನೂನು ವ್ಯವಹಾರಗಳನ್ನು ನಿರ್ವಹಿಸುತ್ತಾರೆ.

ಇನ್ನು ಶ್ರೀನಿವಾಸ ನಾಯ್ಡು ತನ್ನದೆ ರಿಯಲ್‌ ಎಸ್ಟೇಟ್‌ ಸಂಸ್ಥೆ ಕಟ್ಟಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಜತೆ ಶ್ರೀನಿವಾಸ ನಾಯ್ಡು ಮತ್ತೆ ಉತ್ತಮ ಸಂಬಂಧ ಬೆಳೆಸಬಹುದು ಎಂದು ಭಾವಿಸಿದ್ದರು. ಆದರೆ, ರಿಕ್ಕಿ ರೈಗೂ ಶ್ರೀನಿವಾಸ ನಾಯ್ಡುಗೂ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲ. ಅಲ್ಲದೆ, ಐಷಾರಾಮಿ ಕಾರುಗಳಲ್ಲಿ ಶ್ರೀನಿವಾಸ ನಾಯ್ಡು ಓಡಾಡುತ್ತಿದ್ದರು.

Advertisement

ಅದರಿಂದ ಆಕ್ರೋಶಗೊಂಡಿದ್ದ ನಾರಾಯಣಸ್ವಾಮಿ, ಶ್ರೀನಿವಾಸ ನಾಯ್ಡು ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

“ಶ್ರೀನಿವಾಸ ನಾಯ್ಡು ಮೇಲೆ ಹಲ್ಲೆಗೆ ಸಂಚು ಅ.19ರಂದು ರಾತ್ರಿ 10 ಗಂಟೆ ಸುಮಾರಿಗೆ ಐವರು ಆರೋಪಿಗಳು ನಾರಾಯಣಸ್ವಾಮಿ ಜತೆ ಊಟ ಮುಗಿಸಿ ಬಳಿಕ ಕೋರಿಯರ್‌ ಬಾಯ್‌
ಸೋಗಿನಲ್ಲಿ ಶ್ರೀನಿವಾಸ ನಾಯ್ಡು ಫ್ಲ್ಯಾಟ್‌ಗೆ ನುಗ್ಗಿ ಹಲ್ಲೆಗೆ ಸಂಚು ರೂಪಿಸಿದ್ದರು. ಆದರೆ, ಎಚ್ಚೆತ್ತ ಶ್ರೀನಿವಾಸ ನಾಯ್ಡು ಬಾಗಿಲು ತೆರೆಯದರಿಂದ ಆರೋಪಿಗಳು ಅಲ್ಲಿಂದ ತೆರಳಿ ತಡರಾತ್ರಿ 12.40ರ ಸುಮಾರಿಗೆ ಅಪಾರ್ಟ್‌ಮೆಂಟ್‌ ಬೆಸ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ರೇಂಜ್‌ ರೋವರ್‌ ಕಾರಿಗೆ ಬೆಂಕಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.”

Advertisement

Udayavani is now on Telegram. Click here to join our channel and stay updated with the latest news.

Next