ಶಿರಸಿ: ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಿಂದ ರೋಗಿಗಳಿಗೆ ಮಣಿಪಾಲ ಆರೋಗ್ಯ ಕಾರ್ಡ್ ಹಾಗೂ ದಂತ ಆರೋಗ್ಯ ಕಾರ್ಡ್‌ನ್ನು ಬಿಡುಗಡೆಗೊಳಿಸಿದ್ದು, ನಾಲ್ಕು ಲಕ್ಷ ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆ ಉಪ ವ್ಯವಸ್ಥಾಪಕ ಸತೀಶ ಶೆಟ್ಟಿ ತಿಳಿಸಿದರು.
ಅವರು ನಗರದ ಸೇಂಟ್ ಮಿಲಾಗ್ರೀಸ್ ಬ್ಯಾಂಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ಕಳೆದ ವರ್ಷ ಎರಡುವರೆ ಲಕ್ಷ ಕಾರ್ಡ್ ವಿತರಿಸಲಾಗಿತ್ತು. ಈ ಬಾರಿ ಇನ್ನಷ್ಟು ಜನರನ್ನು ಸಂಪರ್ಕಿಸಲಾಗುತ್ತದೆ. ಗೋವಾದಲ್ಲೂ ನಮ್ಮ ಆಸ್ಪತ್ರೆಯ ಸೇವೆ ಒದಗಿಸಲಾಗುತ್ತಿದೆ ಎಂದೂ ಹೇಳಿದರು.
ಒಬ್ಬರಿಗೆ 250 ರೂ., ಕುಟುಂಬಕ್ಕೆ 500, ಪರಿವಾರಕ್ಕೆ 650 ರೂ.ನಲ್ಲಿ ಸೌಲಭ್ಯ ನೀಡಲಾಗುತ್ತದೆ ಎರಡು ವರ್ಷಕ್ಕೆ ಆದರೆ ಒಬ್ಬರಿಗೆ 400, ಕುಟುಂಬಕ್ಕೆ 700 ಹಾಗೂ ಕುಟುಂಬ ಯೋಜನೆಗೆ 850 ರೂ. ದರ ನಿಗದಿ ಮಾಡಲಾಗಿದೆ. ವೈದ್ಯರ ಸಮಾಲೋಚನೆಗೆ ಶೇ.50ರ ರಿಯಾಯತಿ, ಪ್ರಯೋಗಾಲಯ ಪರೀಕ್ಷೆಗೆ ಶೇ.30, ಹೊರ ರೋಗಿ ವಿಭಾಗದ ಪರೀಕ್ಷೆಗೆ ಶೇ.20, ಔಷಧಾಲಯಕ್ಕೆ ಶೇ.12 ಹಾಗೂ ಒಳ ರೋಗಿಯಾದಲ್ಲಿ ಸಾಮಾನ್ಯ ವಾರ್ಡ್‌ನಲ್ಲಿ ಶೇ.25ರ ರಿಯಾಯತಿ ನೀಡಲಾಗುತ್ತದೆ ಎಂದ ಅವರು, ವರ್ಷದಲ್ಲಿ ಎಷ್ಟು ಬಾರಿ ಆದರೂ ಬಳಕೆ ಮಾಡಬಹುದಾಗಿದೆ ಎಂದೂ ಹೇಳಿದರು.
ಮಣಿಪಾಲ ಆರೋಗ್ಯ ಕಾರ್ಡ್ ನೋಂಣಿಗಾಗಿ ಅರ್ಜಿ ಪಡೆಯಲಾಗುತ್ತಿದೆ. ಶಿರಸಿ 9538883673, ಯಲ್ಲಾಪುರ 9538200603, ಮುಂಡಗೋಡ 9538863610, ಸಿದ್ದಾಪುರ 9538200104, ಬನವಾಸಿ 9538020505ಗೆ ಸಂಪರ್ಕ ಮಾಡಬಹುದಾಗಿದೆ. ಆಸಕ್ತರು ಸಂಸ್ಥೆಯ ಪ್ರತಿನಿಧಿ ರಾಜೇಂದ್ರ 7760957390ಗೆ ಸಂಪರ್ಕ ಮಾಡಬಹುದು ಎಂದೂ ತಿಳಿಸಿದರು.
ಈ ರಾಜೇಂದ್ರ, ತೇಜಸ್ವಿನಿ ನಾಯಕ ಇತರರು ಇದ್ದರು.