Advertisement

ನಾಲ್ವರು ಭಾರತೀಯರ ಬಂಧನ

01:05 AM Jul 04, 2019 | mahesh |

ವಾಷಿಂಗ್ಟನ್‌: ಅಮೆರಿಕದಲ್ಲಿರುವ ಐಟಿ ಕಂಪನಿಗಳಿಗೆ ಸಿಬ್ಬಂದಿ ನೇಮಕಾತಿ ಮಾಡಿಕೊಡುವ ಎರಡು ಖಾಸಗಿ ಸಂಸ್ಥೆಗಳ ನಾಲ್ವರು ಅಧಿಕಾರಿಗಳನ್ನು ಅಮೆರಿಕದ ತನಿಖಾಧಿಕಾರಿಗಳು ಬಂಧಿಸಲ್ಪಟ್ಟಿದ್ದು ಆನಂತರ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ.

Advertisement

ನ್ಯೂಜೆರ್ಸಿಯ ವಿಜಯ್‌ ಮಾನೆ (39), ವೆಂಕಟರಮಣ ಮನ್ನಂ (47) ಮತ್ತು ಫ‌ರ್ನಾಂಡೊ ಸಿಲ್ವಾ (53) ಹಾಗೂ ಕ್ಯಾಲಿಫೋರ್ನಿಯಾದ ಸತೀಶ್‌ ವೆಮೂರಿ (52) ಬಂಧಿತರು.

ವಿದೇಶಿ ಐಟಿ ಇಂಜಿನಿಯರ್‌ಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ನೆರವಾಗುವ ಎಚ್1ಬಿ ವೀಸಾದ ನಿಯಮಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇವರ ಮೇಲಿದೆ. ನಿಯಮಗಳ ದುರುಪಯೋಗದ ಮೂಲಕ ತಮಗೆ ಬೇಕಾದ ಕಂಪನಿಗಳಿಗೆ ಎಚ್1ಬಿ ವೀಸಾಗಳನ್ನು ಗಣನೀಯ ಪ್ರಮಾಣದಲ್ಲಿ ದೊರಕಿಸಿಕೊಡಲು ಇವರು ನೆರವಾಗುತ್ತಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next