ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನಲ್ಲಿ ನಾಲ್ವರು ಭಾರತೀಯ ಅಮೆರಿಕನ್ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ತುತ್ಛವಾಗಿ ನಿಂದನೆ ನಡೆಸಲಾಗಿದೆ.
ಭಾರತೀಯ ಮೂಲದವರು ಅಮೆರಿಕವನ್ನು ಹಾಳು ಮಾಡುತ್ತಿದ್ದಾರೆ, ಕೂಡಲೇ ಅವರೆಲ್ಲರೂ ಭಾರತಕ್ಕೆ ತೊಲಗಬೇಕು ಎಂಬ ಆಕ್ರೋಶಕಾರಿ ಕೂಗು ಹಾಕಿದ ಘಟನೆ ನಡೆದಿದೆ.
ಟೆಕ್ಸಸ್‌ನ ಡಲ್ಲಾಸ್‌ನಲ್ಲಿ ಬುಧವಾರ ಮಹಿಳೆಯರು ಹೊಟೇಲ್‌ಗೆ ಊಟಕ್ಕಾಗಿ ತೆರಳಿದ್ದಾಗ ಈ ಘಟನೆ ನಡೆದಿದೆ ಮತ್ತು 2 ನಿಮಿಷ 23 ಸೆಕೆಂಡ್‌ಗಳು ಇರುವ ವೀಡಿಯೋ ಜಾಲತಾ ಣ ಗಳಲ್ಲಿ ವೈರಲ್ ಆಗಿದೆ. ಮೆಕ್ಸನ್ ಅಮೆ ರಿಕನ್ ಮಹಿಳೆ ಎಂದು ಹೇಳಿಕೊಂಡಿರು ವಾಕೆ ಈ ಕೃತ್ಯ ಎಸಗಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಲಾಗಿದೆ. “ಭಾರತೀಯರನ್ನು ನಾನು ದ್ವೇಷಿಸುತ್ತೇನೆ. ಉತ್ತಮ ಜೀವನ ಇಲ್ಲಿ ಸಿಗುತ್ತದೆ ಎಂಬ ಕಾರಣಕ್ಕಾಗಿ ಎಲ್ಲ ಭಾರತೀಯರು ಇಲ್ಲಿಗೆ ಬರುತ್ತಾರೆ’ ಎಂದು ಮಹಿಳೆ ಹೇಳಿರುವುದು ದಾಖಲಾಗಿದೆ.
ಜತೆಗೆ ನೀವೆಲ್ಲರೂ ಈ ದೇಶವನ್ನು ಹಾಳು ಮಾಡುತ್ತಿದ್ದೀರಿ. ಕೂಡಲೇ ನೀವೆಲ್ಲರೂ ದೇಶ ಬಿಟ್ಟು ತೊಲಗಬೇಕು ಎಂದು ಮಹಿಳೆ ಕೆಟ್ಟಪದಗಳನ್ನು ಬಳಕೆ ಬೈದಿದ್ದಾಳೆ.
ಆಕೆಯ ಕಿಡಿಗೇಡಿತನವನ್ನು ಮಹಿಳೆಯರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಒಂದು ಹಂತದಲ್ಲಿ ಮೆಕ್ಸಿಕನ್ ಮಹಿಳೆ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾಳೆ. ಜತೆಗೆ “ನಾನು ಎಲ್ಲಿಯೇ ಹೋಗಲಿ. ಅಲ್ಲಿ ಭಾರತೀಯರು ಇರುತ್ತಾರೆ’ ಎಂದು ಅರಚಿದ್ದಾಳೆ. ರೀಮಾ ರಸೂಲ್ ಎಂಬವರು ಘಟನೆಯ ವೀಡಿಯೋ ಟ್ವೀಟ್ ಮಾಡಿದ್ದಾರೆ.
ಬಂಧನ: ಪೊಲೀಸರು ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಮಹಿಳೆಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಬೆದರಿಕೆ ಒಡ್ಡಿದ, ದೈಹಿಕವಾಗಿ ಹಲ್ಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಖಂಡನೆ: ಉತ್ತರ ಟೆಕ್ಸಾಸ್‌ನಲ್ಲಿರುವ ದಕ್ಷಿಣ ಏಷ್ಯನ್ ಅಮೆರಿಕನ್ ಸಮುದಾಯ ಘಟನೆಯನ್ನು ಖಂಡಿ ಸಿದೆ. ಉತ್ತರ ಟೆಕ್ಸಾಸ್‌ನಲ್ಲಿರುವ ಭಾರತೀಯ ಸಮುದಾಯದ ಅಧ್ಯಕ್ಷೆ ಉರ್ಮೀತ್ ಜುನೇಜಾ ಅವರು ಬೆಳವ ಣಿಗೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ ಮತ್ತು ಮಹಿಳೆಯನ್ನು ಬಂಧಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.