Advertisement

ಕಿತವಾಡ್ ಫಾಲ್ಸ್: ಸೆಲ್ಫಿ ತೆಗೆಯುವಾಗ ಜಾರಿ ಬಿದ್ದು ಬೆಳಗಾವಿಯ ನಾಲ್ವರು ಯುವತಿಯರು ನೀರುಪಾಲು

03:07 PM Nov 26, 2022 | Team Udayavani |

ಬೆಳಗಾವಿ: ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಚಂದಗಡ ತಾಲೂಕಿನ ಕಿತವಾಡ್ ಫಾಲ್ಸ್ ನಲ್ಲಿ ಕಾಲು ಜಾರಿ ಬಿದ್ದು ಬೆಳಗಾವಿ ನಗರದ ನಾಲ್ವರು ಯುವತಿಯರು ಮೃತಪಟ್ಟಿದ್ದು, ಓರ್ವ ಯುವತಿ ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಬೆಳಗಾವಿ ಉಜ್ವಲ ನಗರದ ಅಸೀಯಾ ಮುಜಾವರ (17 ವ), ತಸ್ಮೀಯಾ (20 ವ), ಅನಗೋಳದ ಕುದಶೀಯಾ ಹಾಸಂ‌ಪಟೇಲ (20 ವ) ಹಾಗೂ ಝಟ್ ಪಟ್ ಕಾಲೋನಿಯ ರುಕ್ತಶೀರ್ ಬಿಸ್ತಿ (20 ವ) ಎಂಬ ಯುವತಿಯರು ಮೃತಪಟ್ಟಿದ್ದಾರೆ. ಓರ್ವ ಯುವತಿ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ:ಮಂಗಳೂರು: ಪಾರ್ಕ್ ಮಾಡಲಾಗಿದ್ದ ಕಾರಿಗೆ ಬೆಂಕಿ; ಕೆಲ ಹೊತ್ತು ಆತಂಕ

ಬೆಳಗಾವಿಯಿಂದ ಪ್ರವಾಸಕ್ಕೆಂದು 50 ಜನ ವಿದ್ಯಾರ್ಥಿಗಳ ತಂಡ ಕಿತವಾಡ ಫಾಲ್ಸ್ ಗೆ ತೆರಳಿತ್ತು. ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಐವರು ವಿದ್ಯಾರ್ಥಿನಿಯರು ಬಿದ್ದಿದ್ದಾರೆ. ಈ ಪೈಕಿ ನಾಲ್ವರು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಚಂದಗಡ ತಾಲೂಕಿನ ಕಿತವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next