ಚಿಕ್ಕಮಗಳೂರು: ಇಲ್ಲಿನ ವಿದ್ಯಾರಣ್ಯಪುರ ಗ್ರಾಮದಲ್ಲಿ ತುಂಗಾನದಿಯಲ್ಲಿ ಈಜಾಡಲೆಂದು ಇಳಿದ ನಾಲ್ವರು ನೀರುಪಾಲಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ರತ್ನಾಕರ, ನಾಗೆಂದ್ರ, ಪ್ರದೀಪ ಮತ್ತು ರಾಮಣ್ಣ ಎಂದು ಗುರುತಿಸಲಾಗಿದೆ. ಇವರಲ್ಲಿ ರತ್ನಾಕರ ಅವರ ಮೃತದೇಹ ಪತ್ತೆಯಾಗಿದ್ದು ಇಳಿದ ಮೂವರ ದೇಹಗಳಿಗಾಗಿ ಶೋಧಕಾರ್ಯವನ್ನು ನಡೆಸಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.