Advertisement

ಮೇ 13 ರಿಂದ ಶಿವಮೊಗ್ಗ 4 ದಿನ ‘ಲಾಕ್’: ಹೋಲ್‌ಸೇಲ್ ದಿನಸಿ-ಎಪಿಎಂಸಿ ಬಂದ್

12:44 PM May 11, 2021 | Ganesh Hiremath |

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಕಟ್ಟುನಿಟ್ಟಿನ ಲಾಕ್‌ ಡೌನ್‌ಗೆ ಘೋಷಿಸಲಾಗಿದೆ

Advertisement

ಮಂಗಳವಾರ ( ಮೇ.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಮೇ 13ರಿಂದ ಮೇ 16 ರವೆಗೆ ಶಿವಮೊಗ್ಗ ನಗರಕ್ಕೆ ಸೀಮಿತವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಸ್ಥಳೀಯ ಏರಿಯಾವನ್ನು ಬಿಟ್ಟು ಯಾರು ಹೊರಬರುವಂತಿಲ್ಲ . ದಿನಸಿ ಸೇರಿದಂತೆ ಏನೇ ಅಗತ್ಯ ವಸ್ತು ಬೇಕಾದರೂ ನಾಳೆಯೇ ಖರೀದಿ ಮಾಡಿಟ್ಟುಕೊಳ್ಳಿ ಎಂದು ಸೂಚಿಸಿದರು.

ಎನಿರುತ್ತೆ? ಏನಿರಲ್ಲ?

ಗುರುವಾದಿಂದ ಭಾನುವಾರದವರೆಗೆ ಸಂಪೂರ್ಣ ಲಾಕ್ ಡೌನ್  ಜಾರಿಯಲ್ಲಿರಲಿದ್ದು, , ಈ ಅವಧಿಯಲ್ಲಿ ಯಾವುದೆ ಖರೀದಿಗೆ ಅವಕಾಶ ಇಲ್ಲ. ಮೆಡಿಕಲ್ ಶಾಪ್ ಮಾತ್ರ ಓಪನ್ ಇರಲಿದೆ. ಕೈಗಾರಿಕೆಗಳು ಸಂಪೂರ್ಣ ಬಂದ್ ಆಗಲಿವೆ. ಹೋಲ್‌ಸೇಲ್ ದಿನಸಿ, ಗಾಂಧಿ ಬಜಾರ್ ಪೂರ್ಣವಾಗಿ ಬಂದ್ ಮಾಡಲಾಗಿದೆ. ಎಪಿಎಂಸಿಯನ್ನು ಕೂಡ ಬಂದ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು ಸೇರಿದಂತೆ ಹೊರ ಊರಿನಿಂದ ಬರಲು ಅವಕಾಶವಿಲ್ಲ. ಸ್ಥಳೀಯವಾಗಿ ದಿನಸಿ, ತರಕಾರಿ ಅಂಗಡಿಗಳಿರುತ್ತವೆ. ವಾಹನಗಳ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಸಲಾಗಿದೆ. ಹೊಟೇಲ್‌ನಲ್ಲಿ ಪಾರ್ಸಲ್‌ಗೆ ಮಾತ್ರ ಅನುಮತಿ ನೀಡಲಾಗಿದೆ. ಮಟನ್,‌ ಚಿಕನ್ ಅಂಗಡಿ ಕೂಡ ಬಂದ್  ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next