Advertisement

ಚಿಕ್ಕಬಳ್ಳಾಪುರ : ಮೇ 20 ರಿಂದ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್

04:28 PM May 17, 2021 | Team Udayavani |

ಗುಡಿಬಂಡೆ (ಚಿಕ್ಕಬಳ್ಳಾಪುರ) : ಕೋವಿಡ್ ಸೋಂಕು ತಡೆಗಟ್ಟಲು ಜಿಲ್ಲಾಧಿಕಾರಿಗಳ ಸೂಚನೆಯಂತೆ 144 ಸೆಕ್ಷನ್ ಜಾರಿ ಮಾಡಿ ಇದೇ ಮೇ ತಿಂಗಳ 20 ರಿಂದ 4 ನಾಲ್ಕು ದಿನಗಳ ಕಾಲ ಚಿಕ್ಕಬಳ್ಳಾಪುದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ನೋಡಲ್ ಅಧಿಕಾರಿ ಅಶೋಕ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Advertisement

ತಾಲ್ಲೂಕು ಕಚೇರಿಯ ಆವರಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕೊರೊನ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟುವ ದೃಷ್ಟಿಯಿಂದ ಲಾಕ್ ಡೌನ್ ಅವಶ್ಯಕತೆ ಇರುವುದರಿಂದ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಈ ಸಮಯದಲ್ಲಿ ಸಾರ್ವಜನಿಕರು ಸಹಕರಿಸ ಬೇಕು ಎಂದರು.

ಲಾಕ್ ಡೌನ್ ಸಮಯದಲ್ಲಿ ಎನಿರುತ್ತೆ / ಎನಿರಲ್ಲ

ನಾಲ್ಕು ದಿನಗಳ ಕಾಲ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಾಲು ತರಲು ಹಾಗೂ ಮೆಡಿಕಲ್ ಗೆ ಹೋಗಿ ಬರಲು ನಡೆದುಕೊಂಡೇ ಹೋಗಿ ಬರಬೇಕಾದ ಅವಶ್ಯಕತೆ ಇರುತ್ತದೆ. ದಿನಸಿ, ತರಕಾರಿ, ಅವಶ್ಯಕ ವಸ್ತು ಗಳನ್ನು ತರಲು ಅವಕಾಶ ಇರುವುದಿಲ್ಲ. ತುರ್ತು ಪರಿಸ್ಥಿತಿ ಹೊರತು ಪಡಿಸಿ ಯಾರು ಮನೆಯಿಂದ ಹೊರಗೆ ಬರುವಂತಿಲ್ಲ 144 ಸೆಕ್ಷನ್ ಜಾರಿಯಲ್ಲಿರುತ್ತದೆ.

ಸಾರ್ವಜನಿಕರು ಅವಶ್ಯಕ ವಸ್ತುಗಳನ್ನು ಇಂದಿನ ಎರಡು ದಿನಗಳ ಒಳಗೆ ತೆಗೆದುಕೊಳ್ಳುವುದು ಒಳಿತು, ಸ್ವಲ್ಪ ಎಚ್ಚರ ತಪ್ಪಿದರೂ ನಾಲ್ಕು ದಿನ ಏನು ಸಿಗುವುದಿಲ್ಲ.

Advertisement

ಹೋಮ್ ಕ್ವಾರೆಂಟಿನ್ ಇಲ್ಲ

ಇಂದಿನಿಂದ ಹೋಮ್ ಕ್ವಾರೆಂಟಿನ್ ಇರುವುದಿಲ್ಲ, ತಾಲ್ಲೂಕಿನಲ್ಲಿ ಯಾರಿಗಾದರು ಸೋಂಕು ಕಂಡುಬಂದಲ್ಲಿ ಅಂತವರನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೇಂಟರ್ ನಲ್ಲಿ ಇರಿಸಿ ಅವರಿಗೆ ಬೇಕಾದ ಚಿಕಿತ್ಸೆ ಕೊಡಲಾಗುವುದು, ಕಾರಣ ಈಗಾಗಲೇ ಹೋಮ್ ಕ್ವಾರೆಂಟಿನ್ನಲ್ಲಿರುವವರು ವಿನಾಃ ಕಾರಣ ಮನೆಯಲ್ಲಿ ಮತ್ತು ಹೊರಗಡೆ ಓಡಾಡಿ ರೋಗ ಹರಡುತ್ತಿದ್ದಾರೆ ಎಂಬ ದೂರುಗಳು ಬಂದ ಕಾರಣ ಕೋವಿಡ್ ಕೇರ್ ಸೇಂಟರ್ ಗೆ ವರ್ಗಾಯಿಸಲಾಗುವುದು ಎಂದು ನೋಡಲ್ ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next