ಹೊಸದಿಲ್ಲಿ : ದಕ್ಷಿಣ ದಿಲ್ಲಿಯ ಛತ್ತರ್‌ಪುರ್ ಪ್ರದೇಶದಲ್ಲಿ ಇಂದು ದಿಲ್ಲಿ ಪೊಲೀಸ್ ವಿಶೇಷ ದಳ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ಶಂಕಿತ ಕ್ರಿಮಿನಲ್‌ಗಳು ಹತರಾಗಿದ್ದಾರೆ.
ಎನ್‌ಕೌಂಟರ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಆರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹತರಾದ ಕ್ರಿಮಿನಲ್‌ಗಳನ್ನು ಗ್ಯಾಂಗ್ ಲೀಡರ್ ರಾಜೇಶ್ ಭಾರ್ತಿ, ವಿದ್ರೋಹ್, ಉಮೇಶ್ ಡಾನ್ ಮತ್ತು ಭಿಕು ಎಂದು ಗುರುತಿಸಲಾಗಿದೆ.
ಈ ಗ್ಯಾಂಗ್‌ಸ್ಟರ್‌ಗಳು ಪದೇ ಪದೇ ಬಂದು ಹೋಗುವ ಛತ್ತರ್‌ಪುರದಲ್ಲಿನ ಫಾರ್ಮ್ ಹೌಸ್ ಒಂದರ ಮೇಲೆ ಪೊಲೀಸರು ಕಳೆದ ಮೂರು ತಿಂಗಳಿಂದ ಕಣ್ಣಿಟ್ಟಿದ್ದರು.
ಗ್ಯಾಂಗ್ ಲೀಡರ್ ಭಾರ್ತಿ ಮತ್ತು ವಿದ್ರೋಹ್ ತಲೆ ತಲಾ 1 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು; ಉಮೇಶ್ ತಲೆಗೆ 50,000 ರೂ. ಇನಾಮು ಇತ್ತು. ಭಾರ್ತಿ ಈ ವರ್ಷ ಹರಿಯಾಣ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ.