Advertisement

ವಿಜಯಪುರ: ಕೋವಿಡ್-19 ಸೋಂಕುಮುಕ್ತ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆ

03:15 PM May 03, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಮುಕ್ತರಾಗಿ ಭಾನುವಾರ ಮತ್ತೆ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ 46 ಸೋಂಕಿತರಲ್ಲಿ ಇಂದಿನ ವರೆಗೆ 15 ಜನರು ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ. ಇಬ್ಬರು ಮೃತಪಟ್ಟಿದ್ದು, 29 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಭಾನುವಾರ  ಆಸ್ಪತ್ರೆಯಿಂದ ಬಿಡುಗಡೆ ಆಗಿರುವ ಸೋಂಕು ಮುಕ್ತರನ್ನು ಪಿ-276, ಪಿ-305, ಪಿ-313 ಹಾಗೂ ಪಿ-415 ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 2139 ಜನರ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ್ದು, 1979 ಜನರ ವರದಿ ನೆಗೆಟಿವ್ ಬಂದಿವೆ. 114 ವರದಿ ನಿರೀಕ್ಷೆ ಇದೆ. 2005 ಜನರನ್ನು ನಿಗಾದಲ್ಲಿ ಇರಿಸಲಾಗಿದ್ದು, 424 ಜನರು 28 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಇನ್ನೂ1568 ಜನರು 28 ದಿನಗಳ ನಿಗಾದಲ್ಲಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next