ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ನಾಲ್ವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇವರೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಈ ಬಗ್ಗೆ ದೃಢಪಡಿಸಿದ್ದಾರೆ. ಮಾರ್ಚ್ 23 ಮತ್ತು 24ರಂದು ಮಂಗಳೂರಿನಲ್ಲಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಪ್ರಕಟಿಸಿದ್ಧಾರೆ.
ಮಾರ್ಚ್ 19ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಏರ್ ಇಂಡಿಯಾ ( ಐಎಕ್ಸ್ 814) ಮತ್ತು ಮಾರ್ಚ್ 20ರಂದು ಆಗಮಿಸಿದ್ದ ಸ್ಪೈಸ್ ಜೆಟ್ (ಎಸ್ ಜಿ-60) ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಆದೇಶಿಸಿದ್ದಾರೆ.
ಈ ಮೊದಲು ಭಟ್ಕಳ ಮೂಲದ ವ್ಯಕ್ತಿಗೆ ಮಂಗಳೂರು ಆಸ್ಪತ್ರೆಯಲ್ಲಿ ಸೋಂಕು ಪತ್ತೆಯಾಗಿತ್ತು. ಎರಡನೇ ಸೋಂಕಿತ ಕಾಸರಗೋಡಿನ 32 ವರ್ಷದ ವ್ಯಕ್ತಿಯಾಗಿದ್ದು ಮಾರ್ಚ್ 20ರಂದು ದುಬೈನಿಂದ ಆಗಮಿಸಿದ್ದರು.
ಮೂರನೇ ಸೋಂಕಿತ ಕೂಡಾ ಕಾಸರಗೋಡು ಮೂಲದವನಾಗಿದ್ದು 47 ವರ್ಷದ ವ್ಯಕ್ತಿ ಮಾರ್ಚ್ 19ರಂದು ದುಬೈನಿಂದ ಆಗಮಿಸಿದ್ದ.
ನಾಲ್ಕನೇ ಸೋಂಕಿತ 23 ವರ್ಷದ ವ್ಯಕ್ತಿ ಕಾಸರಗೋಡು ವ್ಯಕ್ತಿಯಾಗಿದ್ದುಸ್ಪೈಸ್ ಜೆಟ್ ನಲ್ಲಿ ದುಬೈನಿಂದ ಆಗಮಿಸಿದ್ದ.
ಐದನೇ ಸೋಂಕಿತ ವ್ಯಕ್ತಿ 70 ವರ್ಷದ ಕಾಸರಗೋಡು ಮೂಲದ ಮಹಿಳೆಯಾಗಿದ್ದು ಮಾರ್ಚ್ 20ರಂದು ಸೌದಿ ಅರೇಬಿಯಾದಿಂದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.