Advertisement

Suspected ಚಂಡೀಪುರ ವೈರಸ್‌ಗೆ ಗುಜರಾತ್‌ನಲ್ಲಿ ನಾಲ್ಕು ಮಕ್ಕಳು ಸಾವು

12:46 AM Jul 14, 2024 | Team Udayavani |

ಗಾಂಧೀನಗರ: ಗುಜರಾತ್‌ನ ಸಬರಕಾಂತ ಜಿಲ್ಲೆಯ ಲ್ಲಿ ಶಂಕಿತ ಚಂಡೀಪುರ ವೈರಸ್‌ನಿಂದ ನಾಲ್ಕು ಮಕ್ಕಳು ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಸೊಳ್ಳೆ, ಉಣ್ಣೆ ಹಾಗೂ ಸ್ಯಾಂಡ್‌ಫ್ಲೈನಿಂದ ಹರಡುವ ಚಂಡೀ ಪುರ ವೈರಾಣುವಿನಿಂದ ಜ್ವರ ಮತ್ತು ಮೆದುಳಿನ ಉರಿ ಯೂತದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜು.10 ರಂದು ಜ್ವರದಿಂದ ಮೃತಪಟ್ಟ 4 ಮಕ್ಕಳಲ್ಲೂ ಇದೇ ರೋಗ ಲಕ್ಷಣಗಳಿದ್ದವು. ಇದೀಗ ಆಸ್ಪತ್ರೆಯಲ್ಲಿ ದಾಖ ಲಾಗಿರುವ ಮಕ್ಕಳಲ್ಲೂ ಇದೇ ರೋಗ ಲಕ್ಷಣಗಳಿರುವ ಕಾರಣ ಇದು “ಚಂಡೀಪುರ ವೈರಸ್‌’ ಎಂಬ ಶಂಕೆಯಿ ದೆ. ಈ ಹಿನ್ನೆಲೆಯಲ್ಲಿ ಎಲ್ಲ 6 ಮಕ್ಕಳ ರಕ್ತದ ಮಾದರಿ ಯನ್ನೂ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ (ಎನ್‌ಐವಿ)ಗೆ ಪರೀಕ್ಷೆಗೆ ಕಳುಹಿಸಲಾಗಿದೆಯೆಂದು ಮುಖ್ಯ ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next