ದುಬೈ: ಓಮನ್ನಲ್ಲಿ ಪ್ರವಾಸಕ್ಕೆ ತೆರಳಿದ್ದಾಗಿ ಪ್ರವಾಹಕ್ಕೆ ಸಿಲುಕಿದ್ದ ನಾಲ್ವರು ಭಾರತೀಯ ಮೂಲದ ಕುಟುಂಬ ಸದಸ್ಯರ ಮೃತದೇಹಗಳು ಕೊನೆಗೂ ಪತ್ತೆಯಾಗಿವೆ. ಕಳೆದ ಶನಿವಾರ ಮಸ್ಕಟ್ನಿಂದ 200 ಕಿ.ಮೀ ದೂರದಲ್ಲಿರುವ ವಾಡಿ ಬನಿ ಖಾಲಿದ್ ಪ್ರದೇಶಕ್ಕೆ ಪಿಕ್ನಿಕ್ಗೆಂದು ತೆರಳಿದ್ದಾಗ ದಾರಿ ಮಧ್ಯದಲ್ಲಿ ಹಠಾತ್ ಪ್ರವಾಹಕ್ಕೆ ಸಿಲುಕಿದ್ದರು. ಈ ವೇಳೆ ವಾಹನದಲ್ಲಿ ಸಿಲುಕಿಕೊಂಡ ಕುಟುಂಬದ ಕೆಲವು ಸದಸ್ಯರು ಮರಗಳನ್ನು ಏರಿ ಬಚಾವಾಗಿದ್ದರು. ಆದರೆ ಇತರ ಆರು ಜನರು ವಾಹನದೊಳಗೆ ಸಿಲುಕಿಕೊಂಡಿದ್ದು, ನಾಪತ್ತೆಯಾಗಿದ್ದರು. ಈ ಸಂಬಂಧ ಶೋಧ ಕಾರ್ಯ ನಡೆಸಿದ ರಕ್ಷಣಾ ಪಡೆಗಳು ನಾಲ್ವರ ಮೃತದೇಹವನ್ನು ಹೊರತೆಗೆದಿವೆ. ಇನ್ನೂ ಇಬ್ಬರ ಮೃತದೇಹಗಳ ಶೋಧ ಕಾರ್ಯ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಓಮನ್ನ ಹಲವು ಪ್ರಾಂತ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವೆಡೆ ಹಠಾತ್ ಪ್ರವಾಹದಿಂದ ಜನರು ವಾಹನಗಳಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಇಂತಹ ಸನ್ನಿವೇಶದಲ್ಲಿ ರಕ್ಷಣಾ ಪಡೆಗಳು ಧಾವಿಸಿ ಸಂತ್ರಸ್ತರನ್ನು ರಕ್ಷಿಸಿವೆ.
Advertisement
ಓಮನ್ ಪ್ರವಾಹಕ್ಕೆ 4 ಭಾರತೀಯರು ಸಾವು
12:37 AM May 25, 2019 | mahesh |