Advertisement

ದರೋಡೆ ಸಂಚು ರೂಪಿಸಿದ್ದ ನಾಲ್ವರ ಬಂಧನ

12:15 PM Jul 30, 2018 | Team Udayavani |

ಬೆಂಗಳೂರು: ರಾತ್ರಿ ವೇಳೆ ದರೋಡೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮೊಹಮದ್‌ ರಸೂಲ್‌, ಸಿರಾಜ್‌ ಶೇಖ್‌,  ಚಿನ್ನಪ್ಪನಹಳ್ಳಿಯ ಅಪ್ಸರ್‌ ಶೇಖ್‌, ಕಂದಲಹಳ್ಳಿ ಕಾಲೋನಿ ನಿವಾಸಿ ಪ್ರದೀಪ್‌, ಬಂಧಿತರು.

Advertisement

ಆರೋಪಿಗಳು  ಮಹದೇವಪುರ ರಿಂಗ್‌ ರಸ್ತೆ ಸುತ್ತಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಬೈಕ್‌ಗಳಲ್ಲಿ ಬರುವವರನ್ನು ಅಡ್ಡಗಟ್ಟಿ ಹಣ, ಚಿನ್ನಾಭರಣ, ಮೊಬೈಲ್‌ ಫೋನ್‌ ದರೋಡೆ ಮಾಡುತ್ತಿದ್ದರು. ಜು.27ರಂದು ರಾತ್ರಿ 7.30ರ ಸುಮಾರಿಗೆ ಚಿನ್ನಪ್ಪನಹಳ್ಳಿಯ ರಸ್ತೆಯಲ್ಲಿ ದರೋಡೆಗೆ ಸಜ್ಜಾಗಿದ್ದ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು.

ಮತ್ತೋರ್ವ ಆರೋಪಿ ಧನರಾಜ್‌ ಪರಾರಿಯಾಗಿದ್ದಾನೆ. ಬಂಧಿತರಿಂದ 8 ಮೊಬೈಲ್‌, ಮೂರು ಬೈಕ್‌, ಎರಡು ಲಾಂಗ್‌ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮಹದೇವಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next