ಚಿತ್ತಾಪುರ: ಪಟ್ಟಣದ ತಾಪಂ ಸಭಾಂಗಣದಲ್ಲಿ ಮೇ 25ರಂದು ಬೆಳಗ್ಗೆ 10:00ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ನಿಮಿತ್ತ ವಿಶೇಷ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಈ ಭಾರಿ ಕಸಾಪ ಸಂಸ್ಥಾಪನಾ ದಿನಾರಚಣೆಯನ್ನು ಬಹಳ ಅರ್ಥಪೂರ್ಣವಾಗಿ ಮಾಡಲು ನಿರ್ಧರಿಸಲಾಗಿದೆ. ವಿಶೇಷ ಉಪನ್ಯಾಸ ಸೇರಿದಂತೆ ಪಿಎಸ್‌ಐ ಮತ್ತು ಕೆಎಎಸ್ ಅಧಿಕಾರಿಗಳಾಗಿ ನೇಮಕವಾದ ತಾಲೂಕಿನ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಕಸಾಪ ಪಾತ್ರ ಕುರಿತು ಸಾಹಿತಿ ಮುಡಬಿ ಗುಂಡೇರಾವ ಸೇಡಂ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ಮಲ್ಲೇಶಾ ತಂಗಾ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಕಾರ್ಯನಿರ್ವಾಹಕ ಅಧಿಕಾರಿ ಲಕ್ಷಣ ಶೃಂಗೇರಿ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೋತಿನಮಡಿ, ಕ್ಷೇತ್ರ ಶಿಕ್ಷಣಾಧಿಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ಕೆಆರ್ ಐಡಿಎಲ್ ಎಇಇ ಬಿ.ಎಸ್. ಪಾಟೀಲ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ,
ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಹಿರಿಯ ಸಾಹಿತಿ ವೀರಯ್ಯಸ್ವಾಮಿ ಸ್ಥಾವರಮಠ ಆಗಮಿಸಲಿದ್ದಾರೆ. ಜಿಲ್ಲಾ ಉತ್ತಮ ಸಿಪಿಐ ಪ್ರಶಸ್ತಿ ಪುರಸ್ಕೃತ ಶಂಕರಗೌಡ ಪಾಟೀಲ, ರಾಯಚೂರು ಕೃಷಿ ವಿವಿ ನಿರ್ದೇಶಕಿ ಸಾವಿತ್ರಿ ನಾಗಣ್ಣ, ಇವಣಿ ಕೆಎಎಸ್, ಸಂತೋಷರಾಣಿ ಕೆಎಎಸ್, ವಿಶ್ವನಾಥ ಅಲ್ಲೂರ ಪಿಎಸ್‌ಐ,
ಆನಂದ ಕಾಶಿ ಪಿಎಸ್‌ಐ, ವಿಜಯಕುಮಾರ ಚವ್ಹಾಣ ಅಳ್ಳೋಳ್ಳಿ ಪಿಎಸ್‌ಐ, ಗೌತಮ ರಾಠೊಡ ಪಿಎಸ್‌ಐ, ಸಂಗೀತಾ ಬಮ್ಮನಳ್ಳಿ ಪಿಎಸ್‌ಐ, ಅಕ್ಕನಾಗಮ್ಮ ನರೇಂದ್ರಕಪುರ ಮುಧೋಳ ಪಿಎಚ್‌ಡಿ, ಶಿವಲೀಲಾ ಶಾಂತಲಿಂಗ ಮಠಪತಿ ಪಿಎಚ್‌ಡಿ ಪದವಿ ಪಡೆದ ಸಾಧಕರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಬರುವ ದಿನಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ, ರಾಜ್ಯೋತ್ಸವ ಪ್ರಶಸ್ತಿ ನೀಡುವುದು, ತಾಲೂಕಿನಾದ್ಯಂತ ಸಾಹಿತ್ಯ ರಥಯಾತ್ರೆ, ನಾಟಕ ಪ್ರದರ್ಶನ, ಸಾಹಿತ್ಯ ನಡಿಗೆ ಶಾಲೆ ಕಡೆಗೆ ಕಾರ್ಯಕ್ರಮಗಳು ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ರಾಜಶೇಖರ ಬಳ್ಳಾ, ನರಸಪ್ಪ ಚಿನ್ನಕಟ್ಟಿ, ಜಗದೇವ ದಿಗ್ಗಾಂವಕರ್, ದೇವಪ್ಪ ನಂದೂರಕರ್, ಸುರೇಶ ಕುಲಕರ್ಣಿ, ಮಹ್ಮದ್ ಇಬ್ರಾಹಿಂ, ವೀರಣ್ಣ ಶಿಲ್ಪಿ, ಮಹೇಶ ಜಾಯಿ, ಶಾಂತಕುಮಾರ ಮಳಖೇಡ, ಮಹೇಶ ಕಾಶಿ ಇದ್ದರು.