Advertisement

20ರಿಂದ ಕವಿಸಂ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ

04:33 PM Jul 18, 2018 | |

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ 129ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜು. 20ರಿಂದ ಏಳು ದಿನಗಳ ಕಾಲ ನಾಟ್ಯ, ಸಂಗೀತ, ಹಾಸ್ಯ, ಜಾನಪದ, ನೃತ್ಯ, ಸಾಂಸ್ಕೃತಿಕ, ನಾಟಕ, ಗೀತ ಗಾಯನ ಸಂಜೆ ಹಾಗೂ ಹಿರಿಯ
ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಸಂಜೆ 5:30ರಿಂದ ಕಾರ್ಯಕ್ರಮಗಳು ಶುರುವಾಗಲಿದ್ದು, ಎಲ್ಲ ಕಾರ್ಯಕ್ರಮಗಳಿಗೆ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜು. 20ರ ಸಂಜೆ 5:30 ಗಂಟೆಗೆ ಸಂಸ್ಥಾಪನಾ ದಿನವನ್ನು ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳು ಉದ್ಘಾಟಿಸಲಿದ್ದಾರೆ. ಅಂದು ನಾಟ್ಯ-ಸಂಗೀತ ಸಂಜೆಯನ್ನು ಲಕ್ಷ್ಮೀ  ಜಾಧವ, ಮೇಘಾ ಹುಕ್ಕೇರಿ ಹಾಗೂ ಸಾಕ್ಷಿ ಹುಕ್ಕೇರಿ ನಡೆಸಿಕೊಡುತ್ತಾರೆ. ಎಸ್‌.ಬಿ. ಗುತ್ತಲ, ಉಷಾಮೂರ್ತಿ, ರಮಾಕಾಂತ ಜೋಶಿ, ಕೃಷ್ಣ ಜೋಶಿ ಹಾಗೂ ಸಿ.ಜಿ. ಹಿರೇಮಠ ಅವರನ್ನು ಸನ್ಮಾನಿಸಲಾಗುವುದು ಎಂದರು.

21ರಂದು ಹಿರಿಯ ವಿದ್ವಾಂಸ ಡಾ|ಗುರುಲಿಂಗ ಕಾಪಸೆ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ|ಸಿ.ವಿ. ಕೆರೆಮನಿ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ನಂತರ ಮಹಾದೇವ ಸತ್ತಿಗೇರಿ, ಮಲ್ಲಪ್ಪ ಹೊಂಗಲ ಹಾಗೂ ಡಾ|ರಾಜಶೇಖರ ಬಶೆಟ್ಟಿ ಅವರಿಂದ ಹಾಸ್ಯ ಸಂಜೆ ನಡೆಯಲಿದೆ. ಡಾ|ಬಿ.ವಿ. ಮಲ್ಲಾಪುರ, ಶಿವಶಂಕರ ಹಿರೇಮಠ, ಎಂ.ಸಿ. ಬಂಡಿ, ಎಂ.ಆರ್‌. ಸತ್ಯನಾರಾಯಣ ಹಾಗೂ ಡಾ|ಸುಲೋಚನಾ ಮಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

22ರಂದು ಪದ್ಮಭೂಷಣ ಡಾ|ಎಂ. ಮಹದೇವಪ್ಪ ಹಾಗೂ ಜಾನಪದ ವಿವಿ ಕುಲಪತಿ ಡಾ|ಡಿ.ಬಿ. ನಾಯಕ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಜಾನಪದ ಸಂಜೆಯಲ್ಲಿ ಮಹಾಂತೇಶ ವಾಲಿ ಹಾಗೂ ಯಕ್ಕೇರಪ್ಪ ನಡುವಿನಮನಿ ಪಾಲ್ಗೊಳ್ಳಲಿದ್ದಾರೆ. ಪ್ರೊ| ಕೆ.ಎಸ್‌. ಶರ್ಮಾ, ವಿ.ಜಿ. ದೀಕ್ಷಿತ, ಗಿರೀಶ ಕುಲಕರ್ಣಿ, ಈಶ್ವರ ಕಮ್ಮಾರ ಹಾಗೂ ಜಯಶೀಲಾ ಬೆಳಲದವರ ಅವರನ್ನು ಗೌರವಿಸಲಾಗುವುದು ಎಂದರು.

23ರಂದು ಕೇಂದ್ರೀಯ ವಿವಿ ಕುಲಪತಿ ಡಾ|ಎಚ್‌.ಎಂ. ಮಹೇಶ್ವರಯ್ಯ ಹಾಗೂ ಛಾಯಾಗ್ರಾಹಕ ಶಶಿ ಸಾಲಿ ಅಭಿಪ್ರಾಯ ಮಂಡಿಸುತ್ತಾರೆ. ನೃತ್ಯ ಸಂಜೆಯಲ್ಲಿ ಭಾರತೀಯ ನೃತ್ಯ ಅಕಾಡೆಮಿಯ ರಾಜು ಟೊಣಪಿ ಹಾಗೂ ಕಲಾವಿದರಾದ ಅಂಕಿತಾ ರಾವ್‌ ಪಾಲ್ಗೊಳ್ಳಲಿದ್ದಾರೆ. ಡಾ| ಎನ್‌.ಎಸ್‌. ಹಿರೇಮಠ, ಜ್ಯೋತಿ ಹೂಸೂರ, ಪ್ರೊ|ಸಿ.ಆರ್‌. ಯರವಿನತಲಿಮಠ, ರಂಜನಾ ನಾಯಕ ಹಾಗೂ ಡಾ|ಅಜಿತ ಪ್ರಸಾದ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.

Advertisement

24ರಂದು ಅನೇಕ ಕಾರ್ಯಕ್ರಮಗಳು ನಡೆಯಲಿದ್ದು, 25ರಂದು ವಿಶ್ರಾಂತ ಕುಲಪತಿ ಡಾ|ಎ. ಮುರಿಗೆಪ್ಪ ಹಾಗೂ ಭಾರತದ ಸಹಾಯಕ ಸಾಲಿಸಿಟರ್‌ ಜನರಲ್‌ ಕೆ.ಬಿ. ನಾವಲಗಿಮಠ ಅನಿಸಿಕೆ ಹಂಚಿಕೊಳ್ಳುವರು. ನಂತರ ನಡೆಯಲಿರುವ ನಾಟಕ ಸಂಜೆಯಲ್ಲಿ ಡಾ| ಗೋವಿಂದ ಮಣ್ಣೂರ ರಚಿಸಿದ ಚನ್ನಬಸಪ್ಪ ಕಾಳೆ ನಿರ್ದೇಶನದಲ್ಲಿ ಕಳ್ಳರು ಮಹಾಕಳ್ಳರು ನಾಟಕವಿದೆ. ಎಸ್‌.ಬಿ. ಮಾದನಬಾವಿ, ಸುರೇಶ ಹಾಲಭಾವಿ, ಎಸ್‌.ಜಿ. ಪಾಟೀಲ, ಪಾರ್ವತಿ ಆರಟ್ಟಿ ಹಾಗೂ ಎಂ.ಎಲ್‌. ಟೊಣಪಿ ಅವರನ್ನು ಸನ್ಮಾನಿಸಲಾಗುವುದು ಎಂದರು.

26ರಂದು ಸಮಾರೋಪ ನಡೆಯಲಿದ್ದು, ಡಾ|ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಕುಲಪತಿ ಡಾ|ಎಂ.ಐ. ಸವದತ್ತಿ ಪಾಲ್ಗೊಳ್ಳಲಿದ್ದು, ಅಂದು ಗೀತ ಗಾಯನ ಸಂಜೆಯನ್ನು ಬಿ.ಐ. ಈಳಿಗೇರ ನಡೆಸಿಕೊಡಲಿದ್ದಾರೆ. ಸಂಘದ ನೂತನ ಗೌರವ ಉಪಾಧ್ಯಕ್ಷರನ್ನು ಗೌರವಿಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next