ಇತರ ಕಡೆಗಳಲ್ಲೂ ಈ ಪ್ರಯೋಗ ನಡೆಯುವಂತೆ ಮಾಡಿದ ಕೀರ್ತಿ ಮಣಿಪಾಲದ ಡಾ|ಟಿಎಂಎ ಪೈಯವರಿಗೆ ಸಲ್ಲುತ್ತದೆ ಎಂದು ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಬಣ್ಣಿಸಿದರು.
Advertisement
ಮಣಿಪಾಲದ ಮಾಹೆ ವಿ.ವಿ., ಡಾ| ಟಿಎಂಎ ಪೈ ಪ್ರತಿಷ್ಠಾನ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ), ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ., ಎಂಇಎಂಜಿ ಆಶ್ರಯದಲ್ಲಿ ಮಣಿಪಾಲದ ವ್ಯಾಲಿ ವ್ಯೂ ಹೊಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ಥಾಪಕರ ದಿನಾಚರಣೆಯಲ್ಲಿ (ಡಾ| ಟಿಎಂಎ ಪೈಯವರ 121ನೇ ಜನ್ಮದಿನ) ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
Related Articles
Advertisement
ಮಂಗಳೂರು ಕೆಎಂಸಿ ವಿಶ್ರಾಂತ ಸಹ ಡೀನ್ ಡಾ| ಸಿ.ಆರ್. ಕಾಮತ್ ಗೌರವಅತಿಥಿಗಳಾಗಿ ಮಾತನಾಡಿ, ಸಿಂಡಿಕೇಟ್ ಬ್ಯಾಂಕ್‌ನ್ನು ನೇಕಾರರಿಗೆ ಸಹಾಯ ಮಾಡಲು ಸ್ಥಾಪಿಸಲಾಯಿತು. ಅನಂತರ ಅದು ವಿಸ್ತಾರವಾಗಿ ಬೆಳೆಯಿತು ಎಂದರು. ಎಂಇಎಂಜಿ ಅಧ್ಯಕ್ಷ, ಎಜಿಇ ಕುಲಸಚಿವ ಡಾ| ರಂಜನ್ ಪೈ, ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಪೈ, ಡಾ| ಟಿಎಂಎ ಪೈ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಖಜಾಂಚಿ ಟಿ. ಅಶೋಕ್ ಪೈ, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ, ಎಜಿಇ ಉಪಾಧ್ಯಕ್ಷ ಸತೀಶ್ ಯು. ಪೈ ಉಪಸ್ಥಿತರಿದ್ದರು ಎಜಿಇ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಸ್ವಾಗತಿಸಿ ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್ ವಂದಿಸಿದರು. ವಾಗಾÏ ಸಹಾಯಕ ಪ್ರಾಧ್ಯಾಪಕ ಡಾ| ನರೇಶ ಪಿ. ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ನಗದು ಬಹುಮಾನವನ್ನು ವಿತರಿಸ ಲಾಯಿತು. ಮೊದಲ ಪರ್ಯಾಯದಲ್ಲಿ ಗೈರು, ಐದನೆಯದಕ್ಕೆ ಹಾಜರು!
ಶ್ರೀಕೃಷ್ಣ ಮಠದಲ್ಲಿ ನಾವು ಪ್ರಥಮ ಪರ್ಯಾಯದಲ್ಲಿದ್ದಾಗ ಮಣಿಪಾಲ ಕೆಎಂಸಿಗೆ ಶಿಲಾನ್ಯಾಸ ಮಾಡಲು ಡಾ| ಪೈಯವರು ಒತ್ತಾಯಿಸಿದರು. ಆದರೆ ಪರ್ಯಾಯ ಅವಧಿಯಾದ ಕಾರಣ ಬರಲಾಗಲಿಲ್ಲ. ಆದರೆ ಐದನೆಯ ಪರ್ಯಾಯದಲ್ಲಿ ನನಗೆ ಅನಾರೋಗ್ಯ ಉಂಟಾಗಿ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುವಂತಾಯಿತು. ಕೆಎಂಸಿ ಆರಂಭಿಸುವಾಗ ಶ್ರೀಕೃಷ್ಣ ದೇವರ ಎದುರು ನಾನು ನಿಂತು ದೇವರಲ್ಲಿ ಪ್ರಾರ್ಥನೆ ನಡೆಸಿದ್ದೆ. ಆಗ ಡಾ| ಪೈಯವರು ಕಣ್ಣೀರುಸುರಿಸಿದ್ದರು. ಆ ಭಾವೋದ್ವೇಗದ ಘಟನೆ ಇಂದಿಗೂ ನೆನಪಿದೆ. ಶ್ರೀಕೃಷ್ಣನ ಅನುಗ್ರಹದಿಂದ ಈಗ ವಿದ್ಯಾಸಾಮ್ರಾಜ್ಯವೇ ನಿರ್ಮಾಣವಾಗಿದೆ. ಎಂಜಿಎಂ ಕಾಲೇಜು ಆರಂಭೋತ್ಸವಕ್ಕೆ ಪರ್ಯಾಯ ಮಠಾಧೀಶರು ಹೊರತುಪಡಿಸಿ ಏಳೂ ಸ್ವಾಮೀಜಿಯವರು ಆಗಮಿಸಿದ್ದರೆನ್ನುವುದು ಉಲ್ಲೇಖನೀಯ.
– ಪೇಜಾವರ ಸ್ವಾಮೀಜಿ ಸಹಾಧ್ಯಾಯಿ ಸಹೋದ್ಯೋಗಿ !
ಮಂಗಳೂರು ಕೆಎಂಸಿ ವಿಶ್ರಾಂತ ಸಹ ಡೀನ್ ಡಾ| ಸಿ.ಆರ್.ಕಾಮತ್ ಅವರ ತಂದೆ ಡಾ| ಸಿ.ಪಿ. ಕಾಮತ್ ಅವರು ಚೆನ್ನೈಯಲ್ಲಿ ಡಾ| ಟಿಎಂಎ ಪೈಯವರ ಸಹಾಧ್ಯಾಯಿ. ಮಣಿಪಾಲ ಕೆಎಂಸಿ ಆರಂಭಿಸುವಾಗ, “ನಿನಗೆ ಪ್ರಾಧ್ಯಾಪಕ ವೈದ್ಯರು ಯಾರು ಸಿಗುತ್ತಾರೆ’ ಎಂದು ಸಿ.ಪಿ. ಕಾಮತ್ ಅವರು ಡಾ| ಪೈಯವರನ್ನು ಕೇಳಿದಾಗ, “ಕಣ್ಣಿನ ವಿಭಾಗಕ್ಕೆ ನೀನೇ ಮುಖ್ಯಸ್ಥ’ ಎಂದು ಹೇಳಿ ಅವರನ್ನೇ ಪ್ರಾಧ್ಯಾಪಕರಾಗಿ ನಿಯೋಜಿಸಿದರು. ಡಾ|ಪೈಯವರ ಗುಣಮಟ್ಟದ ಶಿಕ್ಷಣ ಕಲ್ಪನೆಯಿಂದಾಗಿ ಮೊದಲ ಎಂಬಿಬಿಎಸ್ ತಂಡಕ್ಕೆ ಬ್ರಿಟಿಷ್ ವೈದ್ಯಕೀಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಮಾನ್ಯತೆ ನೀಡಿತ್ತು ಎಂದು ಡಾ| ಸಿ.ಆರ್. ಕಾಮತ್ ಉಲ್ಲೇಖೀಸಿದರು.