Advertisement

ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ  ಶಂಕುಸ್ಥಾಪನೆ

10:50 AM Mar 15, 2018 | Team Udayavani |

ಮೂಡಬಿದಿರೆ: ಕಡಲಕೆರೆ ನಿಸರ್ಗ ಧಾಮದ ವಿವಿಧ ಆಕರ್ಷಣೆಗಳಿಗೆ ಪೂರಕವಾಗಿ ಅರಣ್ಯ ಇಲಾಖೆಯಿಂದ 1.55 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ‘ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ- ಕಡಲಕೆರೆ’ಗೆ ಬುಧವಾರ ಶಾಸಕ ಕೆ. ಅಭಯಚಂದ್ರ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಕಡಲಕೆರೆ ಪರಿಸರದಲ್ಲಿ ಹಸುರೀಕರಣದ ಮೂಲಕ ಇದನ್ನು ಇನ್ನಷ್ಟು ಆಕರ್ಷಕವಾಗಿಸುವ ಕಾರ್ಯ ನಡೆಯುತ್ತಿದೆ. ಪ್ರಕೃತಿ ನಳನಳಿಸುವಲ್ಲಿ ಜನರು ಆರೋಗ್ಯವಂತರಾಗಿರುತ್ತಾರೆ ಎಂದ ಅವರು, ಕೆರೆಗಳ ಅಭಿವೃದ್ಧಿ ನಿಧಿಯಿಂದ ಹೆಚ್ಚಿನ ಅನುದಾನವನ್ನು ತರಿಸಿ ಕಡಲಕೆರೆಯ ಹೂಳೆತ್ತಿ ವರ್ಷವಿಡೀ ನೀರು ನಿಲ್ಲುವಂತೆ ಮಾಡಿ ಪ್ರಕೃತಿ ಪ್ರಿಯರನ್ನು ಆಕರ್ಷಿಸುವಂತೆ ಮಾಡಲಾಗುವುದು ಎಂದರು.

108 ಟ್ರೀ ಪಾರ್ಕ್‌ ನಿರ್ಮಾಣ
ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಸಂಜಯ್‌ ಬಿಜ್ಜೂರು ಮಾತನಾಡಿ, ರಾಜ್ಯದಲ್ಲಿ 108 ಟ್ರೀ ಪಾರ್ಕ್‌ಗಳು ನಿರ್ಮಾಣಗೊಳ್ಳುತ್ತಿವೆ. ಅವಿಭಜಿತ ಜಿಲ್ಲೆಯಲ್ಲಿ 8 ಟ್ರೀ ಪಾರ್ಕ್‌ ಗಳಿದ್ದು 3 ಸಂಪೂರ್ಣಗೊಂಡಿವೆ. 5 ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಈ ವೃಕ್ಷ ಉದ್ಯಾನದಲ್ಲಿ ಪಕ್ಷಿ ವೀಕ್ಷಣೆ, ಮಕ್ಕಳ ಉದ್ಯಾನವನ, ಔಷಧೀಯ ಗಿಡಗಳ ವನ, ನೈಸರ್ಗಿಕ ನಡಿಗೆ ಪಥ, ಪರಿಸರ ಮತ್ತು ವನ್ಯಜೀವಿಗಳ ಮಾಹಿತಿ ಪ್ರದರ್ಶನ ಮೊದಲಾದ ಕಾಮಗಾರಿಗಳು ಸೆಪ್ಟಂಬರ್‌ನೊಳಗೆ ನಡೆಯಲಿವೆ ಎಂದು ತಿಳಿಸಿದರು.

ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌. ಪ್ರಭಾಕರನ್‌, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಗ್ಸಾಂಡರ್‌, ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್‌ ಭಟ್‌ ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್‌. ಸುವರ್ಣ, ಉಪಾಧ್ಯಕ್ಷ ವಿನೋದ್‌ ಸೆರಾವೋ, ಮೂಡಾದ ಅಧ್ಯಕ್ಷ ಸುರೇಶ್‌ ಪ್ರಭು, ಪುರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ಬಶೀರ್‌, ಸದಸ್ಯ ಕೊರಗಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಪಿ.ಕೆ. ಥಾಮಸ್‌, ರೋಟರಿ ಕ್ಲಬ್‌ ಅಧ್ಯಕ್ಷ ಶ್ರೀಕಾಂತ ಕಾಮತ್‌, ತೋಟಗಾರಿಕಾ ವಿ.ವಿ. ಆಡಳಿತ ಸಮಿತಿ ಮಾಜಿ ಸದಸ್ಯ ಸಂಪತ್‌ ಸಾಮ್ರಾಜ್ಯ, ಅರಣ್ಯ ಸಮಿತಿಯ ಅಧ್ಯಕ್ಷರಾದ ನಾರಾಯಣ ಪೂಜಾರಿ, ಹರೀಶ್‌ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು. ಮೂಡಬಿದಿರೆ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್‌. ಆರ್‌ ಸುಬ್ರಹ್ಮಣ್ಯ ಸ್ವಾಗತಿಸಿದರು. ಮಂಜುನಾಥ ಗಾಣಿಗ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next