Advertisement

ಸಂಗೀ ತವಿವಿಯಲ್ಲಿ ಕಲಿತವರು ನಿರುದ್ಯೋಗಿ ಆಗಿಲ್ಲ

03:27 PM Sep 23, 2020 | Suhan S |

ಮೈಸೂರು: ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗೆ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಸುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ರಂಗ ತಜ್ಞ ಮತ್ತು ಸಾಹಿತಿ ಪ್ರೊ. ಅಶೋಕಕುಮಾರ ರಂಜೇರೆ ಅಭಿಪ್ರಾಯಪ್ಟರು.

Advertisement

ನಗರದ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ವಿವಿ ಸಂಸ್ಥಾಪನಾ ದಿನಾ ಚರಣೆಯಲ್ಲಿ ಅವರು ಮಾತನಾಡಿದರು.

ನಿರ್ಲಕ್ಷಿತ ವಿಷಯಗಳಿಗೆ ಒತ್ತು: ಸಾಮಾನ್ಯ ವಿಶ್ವ ವಿದ್ಯಾಲಯಗಳು ನಿರ್ಲಕ್ಷ್ಯ ಮಾಡಿರುವ ವಿಷಯ ಗಳನ್ನು ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ ಮುನ್ನೆಲೆಗೆ ತಂದು ಜನರಿಗೆ ಹತ್ತಿರ ವಾಗಿಸುವ ಕೆಲಸ ಮಾಡುತ್ತಿದೆ. ಸಂಗೀತ, ನೃತ್ಯ, ನಾಟಕದಂತಹ ಕಲೆಗಳನ್ನು ಕಲಿಸಿ ಜನರಿಗೆ ತಲುಪಿಸುವ ಕೆಲಸ ಈ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ. ಮಿಕ್ಕ ವಿಶ್ವವಿದ್ಯಾನಿಲಯಗಳು ಪ್ರವೇಶಾತಿ, ಪರೀಕ್ಷೆ, ಅಂಕಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತವೆ. ಆದರೆ, ಈ ವಿವಿಯಲ್ಲಿ ಅದೆಲ್ಲವನ್ನೂ ಮೀರಿದ ಕೆಲಸ ಮಾಡುತ್ತಿದೆ. ಜೊತೆಗೆ ಜನರೊಂದಿಗೆ ಸಮಾಜದಲ್ಲಿ ಹೇಗಿರಬೇಕು ಎಂಬುದು ಈ ವಿಶ್ವವಿದ್ಯಾಲಯ ಕಲಿಸಿಕೊಡುತ್ತದೆ ಎಂದು ಹೇಳಿದರು.

ಸ್ವಾವಲಂಬಿ ಬದುಕು: ಸಾಂಸ್ಕೃತಿಕ ಪರಂಪರೆಯನ್ನುಎತ್ತಿ ಹಿಡಿಯುತ್ತಿರುವ ಈ ವಿವಿಯಲ್ಲಿ ಆಡಳಿತಾಂಗ ಕೊನೆಯ ಆದ್ಯತೆ. ಮೊದಲು ಅಧ್ಯಯನಕ್ಕೆ ನಂತರ ಪ್ರಸರಣಕ್ಕೆ ಆದ್ಯತೆ ಕೊಡಲಾಗುತ್ತದೆ. ಪಾಠ ಕೇಳಲು ಬೇಸರವಾಗಬಹುದು. ಆದರೆ ಹಾಡು, ನೃತ್ಯ, ಸಂಗೀತದಿಂದ ಎಂದಿಗೂ ಬೇಸರವಾಗದು. ಕಲೆಗೆ ಇರುವ ಶಕ್ತಿ ಅಂತಹದ್ದು. ಆದರೆ ನಿರುದ್ಯೋಗದ ಭಯದಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ. ಬೇರೆ ಕಡೆ ಓದಿ ನಿರುದ್ಯೋಗಿಯಾಗಿ ಉಳಿದಿರುವವರು ಸಿಗುತ್ತಾರೆ.ಆದರೆಇಲ್ಲಿಕಲಿತವರಿಗೆ ಹಾಗಾಗುವುದಿಲ್ಲ. ಸ್ವಾವಲಂಬಿಯಾಗಿ ಬದುಕುವುದನ್ನು ವಿಶ್ವವಿದ್ಯಾಲಯಕಲಿಸುತ್ತದೆ ಎಂದರು.

ಸಮಾಜಮುಖೀ ವಿದ್ಯೆ: ಪ್ರಸಾರಾಂಗದ ಸಂಚಾಲಕ ಎಚ್‌.ಎಂ. ನಟರಾಜು ಮಾತನಾಡಿ, ಪ್ರಸಾರಾಂಗಸಮಾಜಮುಖೀ ವಿದ್ಯೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ನಾಟಕ ರಚನಾ ಶಿಬಿರ, ಸಂಗೀತ ಚಿಕಿತ್ಸೆ, ಭರತನಾಟ್ಯ, ಬೀದಿ ನಾಟಕ ಶಿಬಿರ ಸೇರಿದಂತೆ ಸಾಕಷ್ಟು ವಿಚಾರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈಗ 3 ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದ್ದು, ಇನ್ನು ಮುಂದೆ 10 ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.

Advertisement

ಇದಕ್ಕೂ ಮುನ್ನ ಪ್ರದರ್ಶಕ ಕಲೆಗಳು-ಅನನ್ಯತೆ ಮತ್ತು ಪ್ರಸ್ತುತತೆ’, ಪರ್ಫಾರ್ಮಿಂಗ್‌ ಆರ್ಟ್ಸ್ ಆ್ಯಸ್‌ ವಾಯ್ಸ್ ಆಫ್ ಪೀಪಲ್ (ವಾಲ್ಯೂಮ್‌1 ಮತ್ತು2) ಪುಸ್ತಕಗಳನ್ನುಲೋಕಾರ್ಪಣೆಗೊಳಿಸಲಾಯಿತು. ರಂಗನಿರ್ದೇಶಕ ಪ್ರೊ. ಎಸ್‌.ಆರ್‌. ರಮೇಶ್‌ ಬಿಡುಗಡೆ ಯಾದ ಪುಸ್ತಕಗಳ ಬಗ್ಗೆ ಮಾತನಾಡಿದರು. ಸಂಗೀತ ವಿವಿಯ ಕುಲಪತಿ ಹಾಗೂ ಕುಲಸಚಿವ ಪ್ರೊ.ನಾಗೇಶ್‌ವಿ.ಬೆಟ್ಟಕೋಟೆ,ಪರೀಕ್ಷಾಂಗಕುಲಸಚಿವ ಪ್ರೊ.ಆರ್‌.ರಾಜೇಶ್‌, ಮೈಸೂರು ವಿವಿ ಲಲಿತಕಲಾ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥ ಪ್ರೊ. ಸಿ.ಎ. ಶ್ರೀಧರ್‌, ರೇಣುಕಾಂಬ, ಡಾ. ದುಂಡಯ್ಯ ಪೂಜೇರ, ಡಾ. ಭುವನೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next