Advertisement

ಎಸ್‌ಬಿಆರ್‌ನಲ್ಲಿ ಶಿಕ್ಷಣಕ್ಕೆಭದ್ರ ಅಡಿಪಾಯ: ನಿಷ್ಠಿ

11:57 AM Jan 26, 2018 | Team Udayavani |

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಹೃದಯವಾಗಿರುವ ಶರಣಬಸವೇಶ್ವರ ವಸತಿ ಪಬ್ಲಿಕ್‌ (ಎಸ್‌ಬಿಆರ್‌) ಶಾಲೆ ಹಾಗೂ ಕಾಲೇಜಿನಿಂದ ಪ್ರತಿ ವರ್ಷ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗೆ
ಪ್ರವೇಶಾತಿ ಪಡೆಯುತ್ತಿರುವುದು ಶಾಲೆಯ ಶೈಕ್ಷಣಿಕ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ನಿರಂಜನ್‌ ನಿಷ್ಠಿ ಹೇಳಿದರು.

Advertisement

ಎಸ್‌ಬಿಆರ್‌ ಶಾಲೆಯ 2017-18ನೇ ಸಾಲಿನ ಶೈಕ್ಷಣಿಕ ವಾರ್ಷಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವರ್ಷಂಪ್ರತಿ ವೈದ್ಯಕೀಯ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ನೂರಾರು ವಿದ್ಯಾರ್ಥಿಗಳು ಪ್ರವೇಶಾತಿ
ಪಡೆಯುತ್ತಿರುವುದನ್ನು ಅವಲೋಕಸಿದರೆ ಎಸ್‌ ಬಿಆರ್‌ ಶಾಲೆ ಹಾಗೂ ಕಾಲೇಜಿನಲ್ಲಿ ಶಿಕ್ಷಣಕ್ಕೆ ಭದ್ರ ಅಡಿಪಾಯ ಹಾಕುತ್ತಿರುವುದನ್ನು ನಿರೂಪಿಸುತ್ತದೆ ಎಂದರು.

ಇನ್ನೂರು ಸಮೀಪ ವಿದ್ಯಾರ್ಥಿಗಳು ನೀಟ್‌ ನಲ್ಲಿ ಯಶಸ್ವಿಯಾಗಿ ವೈದ್ಯಕೀಯ ಕೋರ್ಸ್‌ ಪ್ರವೇಶಾತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಎಸ್‌ಬಿಆರ್‌ನಲ್ಲಿಯೇ ವೈದ್ಯಕೀಯ ಕಾಲೇಜು ಶುರುವಾಗುವುದು ಅಗತ್ಯವೆನಿಸುತ್ತಿದೆ ಎಂದು ಹೇಳಿದರು.

ಶೈಕ್ಷಣಿಕ ವರ್ಷದಾದ್ಯಂತ ವಿದ್ಯಾರ್ಥಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ
ವಿತರಿಸಲಾಯಿತು. ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಾದ ಆದಿತ್ಯ ಮದರಿ, ಶ್ರೇಯಾ ಚಿಂತಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಶರಣಬಸವೇಶ್ವರ ಲಿಂಗರಾಜಪ್ಪ ಅಪ್ಪ ಅವರನ್ನು ಶೈಕ್ಷಣಿಕ ವರ್ಷದ ಆದರ್ಶ ವಿದ್ಯಾರ್ಥಿ ಎಂದು
ಘೋಷಿಸಲಾಯಿತು. ಶಾಲೆಯ ಸಾಂಸ್ಕೃತಿಕ ವಿಭಾಗದ ವಿದ್ಯಾರ್ಥಿ ನಾಯಕರಾದ ಮೇಘನಾ, ಅನಿರುದ್ಧ ಹಾಜರಿದ್ದರು.
 
ಶಾಲೆಯ ಪರಂಪರೆಯಿಂದ ಬಂದ ಐತಿಹಾಸಿಕ ವ್ಯಕ್ತಿಗಳ ಹೆಸರಿನಲ್ಲಿರುವ ತಂಡಗಳ ಇಡೀ ವರ್ಷದ ಸಾಧನೆ ಗಮನಿಸಿ 100 ಅಂಕಗಳೊಂದಿಗೆ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧಿ  ತಂಡಕ್ಕೆ ಅತ್ಯುತ್ತಮ ತಂಡ ಎಂದು ಘೋಷಿಸಲಾಯಿತು. ಸ್ವಾತಂತ್ರ್ಯ ಸೇನಾನಿ ಸುಭಾಶ್ಚಂದ್ರ ಭೋಸ್‌ ಹೆಸರಿನಲ್ಲಿರುವ ತಂಡಕ್ಕೆ 83 ಅಂಕಗಳೊಂದಿಗೆ ದ್ವಿತೀಯ ಅತ್ಯುತ್ತಮ ತಂಡ ಎಂದು ಘೋಷಿಸಲಾಯಿತು.

ವಿವಿಧ ಮಹನೀಯರ ದಿನಾಚರಣೆಯೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯು ಕಂಕಣ ಬದ್ಧವಾಗಿದೆ ಎಂದು ಪ್ರಾಚಾರ್ಯ ಪ್ರೊ| ಎನ್‌.ಎಸ್‌.ದೇವರಕಲ್‌ ಹೇಳಿದರು. 

Advertisement

ಮೊಂಟೆಸರಿ ವಿಭಾಗದಿಂದ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. 400 ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು. ಶಾಲೆಯ ಹಿರಿಯ ವಿಜ್ಞಾನ ಶಿಕ್ಷಕ ಪ್ರಸಾದ ಜಿ.ಕೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next