Advertisement

ಸಿಕ್ಕಿದ್ದು 90; ಕೊಟ್ಟದ್ದು 40 ಅಂಕ!

11:15 PM May 07, 2019 | Lakshmi GovindaRaj |

ಸುಳ್ಯ: ಫಲಿತಾಂಶ ಪ್ರಕಟವಾದಾಗ ಕನ್ನಡ ಪಠ್ಯದಲ್ಲಿ ಸಿಕ್ಕಿದ್ದು 40 ಅಂಕ, ಉತ್ತರಪತ್ರಿಕೆ ತರಿಸಿ ಪರಿಶೀಲಿಸಿದಾಗ ಅದರಲ್ಲಿರುವುದು 90 ಅಂಕ! ಮೌಲ್ಯಮಾಪಕರ ಎಡವಟ್ಟಿನಿಂದ ಸುಳ್ಯ ಮಿತ್ತಡ್ಕ ರೋಟರಿ ಶಾಲಾ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯುಕ್ತಾ ಅವರಿಗೆ ಕಡಿಮೆ ಅಂಕ ದೊರೆತಿದೆ.

Advertisement

ಉತ್ತರ ಪತ್ರಿಕೆ ಪರಿಶೀಲಿಸಿದ ಸಂದರ್ಭ ಅಸಲಿ ಕಥೆ ಗೊತ್ತಾಗಿದೆ. ಕೇರ್ಪಳ ನಿವಾಸಿ ಸೋಮನಾಥ ಅವರ ಪುತ್ರಿ ಯುಕ್ತಾ ಕನ್ನಡ ಹೊರತುಪಡಿಸಿ ಇತರ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದರು. ಕನ್ನಡದಲ್ಲಿ ಹೆಚ್ಚು ಅಂಕ ಬರಬೇಕಿದ್ದ ಕಾರಣ ಹಣ ಪಾವತಿಸಿ ಉತ್ತರ ಪತ್ರಿಕೆಯ ಛಾಯಾಪ್ರತಿ ತರಿಸಲಾಯಿತು.

ಈ ವೇಳೆ 90 ಅಂಕದಷ್ಟು ಈಕೆ ಸರಿ ಉತ್ತರ ಬರೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಈಕೆ 50 ಅಂಕ ನಷ್ಟವಾಗಿದೆ. ಆದರೆ ಹೆಚ್ಚುವರಿ 50 ಅಂಕವನ್ನು ಪೂರ್ತಿ ಸೇರಿಸಲು ಸಾಧ್ಯವಿಲ್ಲ.

6 ಅಂಕವಷ್ಟೇ ಸೇರಿಸಬಹುದು ಎಂದು ಇಲಾಖೆ ಮಾಹಿತಿ ನೀಡಿದೆ ಎಂದು ಆಕೆಯ ಪೋಷಕರು ದೂರಿದ್ದು, ಇದರಿಂದ ಶೇಕಡಾವಾರು ಅಂಕ ಕುಸಿತ ಕಂಡಿದೆ ಎಂದಿದ್ದಾರೆ. ವೈದ್ಯೆಯಾಗುವ ಕನಸು ಕಂಡಿರುವ ಈಕೆ ಸಿಇಟಿ ಮತ್ತು ನೀಟ್‌ ಪರೀಕ್ಷೆ ಬರೆದಿದ್ದು, 44 ಅಂಕ ನೀಡದಿರುವ ಇಲಾಖಾ ಕ್ರಮದ ಬಗ್ಗೆ ಅಚ್ಚರಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next