Advertisement

Beijing: ಡೈನೋಸಾರ್‌ ಮಾದರಿಯ ವಿಲಕ್ಷಣ ಹಕ್ಕಿಯ ಪಳಯುಳಿಕೆ!

08:38 PM Sep 07, 2023 | Team Udayavani |

ಬೀಜಿಂಗ್‌: 140 -150 ದಶಲಕ್ಷ ವರ್ಷಗಳ ಹಿಂದೆ ಚೀನಾದಲ್ಲಿ ಜೀವಿಸಿತ್ತು ಎನ್ನಲಾಗಿರುವ ವಿಚಿತ್ರ ಜೀವಿಯೊಂದರ ಅಸ್ಥಿಪಂಜರವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಡೈನೋಸಾರ್‌ ಪ್ರಾಣಿಯಂತೆ ಉದ್ದನೆಯ ಕಾಲುಗಳನ್ನು ಹೊಂದಿದ್ದು, ಹಕ್ಕಿಗಳಂತೆ ರೆಕ್ಕೆಯನ್ನೂ ಹೊಂದಿರುವ ಈ ವಿಲಕ್ಷಣ ಜೀವಿ ವಿಜ್ಞಾನಿಗಳಲ್ಲಿ ಪಕ್ಷಿಗಳ ವಿಕಸನದ ಬಗ್ಗೆಯೇ ಗೊಂದಲ ಮೂಡಿಸಿದೆ. ಫ‌ುಜಿಯಾನ್‌ ಪ್ರಾಂತ್ಯದಲ್ಲಿ ಜೀವಿಯ ಪಳಯುಳಿಕೆ ಪತ್ತೆಯಾಗಿದ್ದು, ವಿಜ್ಞಾನಿಗಳು ಅದನ್ನು ಫ‌ುಜಿಯಾನ್ವೆನೇಟರ್‌ ಎಂದು ಹೆಸರಿಸಿದ್ದಾರೆ.

Advertisement

ಚೈನೀಸ್‌ ಅಕಾಡೆಮಿ ಆಫ್ ಸೈನ್ಸ್‌ನ ವಿಜ್ಞಾನಿ ಮಿನ್‌ ವಾಂಗ್‌ ಈ ಕುರಿತು ಮಾಹಿತಿ ನೀಡಿದ್ದು, ಈ ಪಳಯುಳಿಕೆಯೇ ವಿಲಕ್ಷಣವಾಗಿದೆ. ಪಕ್ಷಿ ಪ್ರಭೇದವೆಂದು ವರ್ಗೀಕರಿಸೋಣವೆಂದರೆ ಡೈನೋಸಾರ್‌ ಮಾದರಿಯಲ್ಲಿ ಅದರ ಕಾಲುಗಳಿವೆ ಮತ್ತು ಯಾವುದೇ ಆಧುನಿಕ ಪಕ್ಷಿಗಳಿಗೂ ಹೋಲುವಂತಿಲ್ಲ. ಪ್ರಾಣಿ ಎಂದು ವರ್ಗೀಕರಿಸಲು ನೋಡಿದರೆ ಇದಕ್ಕೆ ರೆಕ್ಕೆಗಳಿದ್ದಿದ್ದು ತಿಳಿದುಬಂದಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಲಕ್ಷಣ ಜೀವಿಯ ಮೂಲ ಪತ್ತೆಹಚ್ಚಲು ಸಂಶೋಧನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನೂ ಜೀವಿಯ ತಲೆ ಬುರುಡೆ ಹಾಗೂ ಪಾದದ ಪಳಯುಳಿಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಅದರ ಆಹಾರ ಮತ್ತು ಜೀವನಶೈಲಿಯನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ ಎಂಬುದಾಗಿಯೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next