Advertisement
ಮೃತರಲ್ಲಿ ಜಿಲ್ಲೆಯ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ ಅಕ್ಕನಮಗ ವಿಜಯ ದೊಡಮನಿ (45 ವ), ಆತನ ಸ್ನೇಹಿತರಾದ ಚಿದಾನಂದ ನಾಗೇಶ ಸೂರ್ಯವಂಶಿ (45 ವ), ಸೋಮನಾಥ ಕಾಳೆ (43 ವ) ಹಾಗೂ ಸಂದೀಪ ಪವಾರ (40 ವ) ಎಂದು ಗುರುತಿಸಲಾಗಿದೆ. ಮೃತರು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದವರು.
Related Articles
Advertisement
ನಿಶ್ಚಿತಾರ್ಥಕ್ಕಾಗಿ ಗುತ್ತಿಯ ಬಾಡಿಗೆ ಪಡೆದಿದ್ದ ಕೆಎ 22 ಎಫ್ 2198 ಸಂಖ್ಯೆಯ ಬಸ್ ನರಗುಂದ ನಗರದತ್ತ ತೆರಳುತ್ತಿದ್ದಾಗ ಎದುರಿಗೆ ವೇಗವಾಗಿ ಆಗಮಿಸಿದ ಎಂಎಚ್ 13 ಸಿಎಸ್ 3330 ಸಂಖ್ಯೆಯ ಕಾರು ಮುಖಾಮುಖಿ ಡಿಕ್ಕಿಯಾಗಿವೆ.
ಅಪಘಾತದ ಸುದ್ದಿ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಅಪಘಾತ ದುರಂತದ ಕಾರಣ ರಾಷ್ಟ್ರೀಯ ಹೆದ್ದಾರಿ- 52 ರಲ್ಲಿ ಸಂಚಾರಕ್ಕೆ ಕೆಲಕಾಲ ವ್ಯತ್ಯಯವಾಗಿತ್ತು.