ಮುಂಬಯಿ: ಫೋರ್ಟ್ ವೆಸ್ಟರ್ನ್ ಇಂಡಿಯಾ ಶನಿಮಹಾತ್ಮಾ ಪೂಜಾ ಸಮಿತಿಯ ವಜ್ರ ಮಹೋತ್ಸವದ ಅಂಗವಾಗಿ ಕೈಗೊಂಡಿರುವ ಸರಣಿ ಕಾರ್ಯಕ್ರಮದ ದ್ವಿತೀಯ ಕಾರ್ಯಕ್ರಮವಾಗಿ ಯಕ್ಷ-ಗಾನ ವೈಭವವು ಜ. 27ರಂದು ಭಾಯಂದರ್ ಪೂರ್ವದ ಗೋಡೆªàವ್ ನಾಕಾದ ಶುಭಂ ಪಾರ್ಟಿ ಸಭಾಗೃಹದಲ್ಲಿ ನಡೆಯಿತು.
ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಸರದ ಪುಟಾಣಿಗಳಿಂದ ನೃತ್ಯ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಮೀರಾರೋಡ್ ಪಲಿಮಾರು ಮಠದ ಪ್ರಬಂಧಕ, ಪುರೋಹಿತ ರಾಧಾಕೃಷ್ಣ ಭಟ್ ಅವರು ಆಶೀರ್ವಚನ ನೀಡಿದರು.
ಅತಿಥಿಗಳಾಗಿ ಎಂಎಎಸ್‌ಎ ಸೌದಿ ಅರೇಬಿಯಾ ಇದರ ಗೌರವಾಧ್ಯಕ್ಷ ಸದಾಶಿವ ಪೂಜಾರಿ, ಎಂಎಎಸ್‌ಎ ಸೌದಿ ಅರೇಬಿಯಾ ಇದರ ಉಪಾಧ್ಯಕ್ಷ ಸತೀಶ್ ಬಾಜಲ್, ಉದ್ಯಮಿ ನಾರಾಯಣ ಪೂಜಾರಿ, ಮೀರಾರೋಡ್ ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷ ಸಂಜೀವ ಶೆಟ್ಟಿ, ಭಾಯಂದರ್ ಅಯ್ಯಪ್ಪ ಆರಾಧನಾ ವೃಂದದ ಕಾರ್ಯದರ್ಶಿ ಸುಧಾಕರ ಜಿ. ಪೂಜಾರಿ ಗುರುಸ್ವಾಮಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಭಾಯಂದರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನರೇಶ್ ಪೂಜಾರಿ, ನಿತ್ಯಾನಂದ ಸೇವಾ ಸಮಿತಿ ಮೀರಾ-ಭಾಯಂದರ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ, ಬಂಟರ ಸಂಘ ಮೀರಾರೋಡ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್ ಶೆಟ್ಟಿ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಾರ್ಯಕ್ರಮದ ಪ್ರಾಯೋ ಜಕರಾದ ನಮ ಜವನೆರ್ ಸಂಘಟನೆಯ ಅಧ್ಯಕ್ಷ ಚೇತನ್ ಶೆಟ್ಟಿ ಮೂಡಬಿದ್ರೆ ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಗೆ ಪೂಜಾ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿರುವ ವಸಾಯಿ ಸಾರ್ವಜನಿಕ ಶನೀಶ್ವರ ಮಂಡಳಿ, ಭಾಯಂದರ್ ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ, ಭಾಯಂದರ್ ನಾರಾಯಣ ಸುವರ್ಣ, ರಾಜಶೇಖರ ಮೂಲ್ಕಿ ಮೊದಲಾದವರನ್ನು ಅಭಿನಂದಿಸಲಾಯಿತು. ಪರಿಸರದ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಹರೀಶ್ ಜಿ. ಅಮೀನ್ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಹರೀಶ್ ಶಾಂತಿ, ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷ ಜೆ. ಜೆ. ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಶರತ್ ಪೂಜಾರಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ವಿಶ್ವನಾಥ ಭಂಡಾರಿ ವಂದಿಸಿದರು. ವಿಶ್ವನಾಥ ಕೋಟ್ಯಾನ್, ಮೋಹನ್ ಪೂಜಾರಿ, ಸತೀಶ್ ಕೋಟ್ಯಾನ್, ವಾಸು ಪೂಜಾರಿ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.