Advertisement

ಅಭಿವೃದ್ಧಿಗಾಗಿ ರೈತಪರ ಯೋಜನೆ ರೂಪಿಸಿ

07:39 AM May 31, 2020 | Lakshmi GovindaRaj |

ಚನ್ನರಾಯಪಟ್ಟಣ: ದೇಶದ ಅಭಿವೃದ್ಧಿಗಾಗಿ ರೈತ ಪರವಾದ ಹೊಸ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ  ನಿಮಿತ್ತ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಕಾಂಗ್ರೆಸ್‌ ಮುಖಂಡರದ ಸಭೆಯಲ್ಲಿ ಮಾತನಾಡಿದರು.

Advertisement

ರೈತರು, ಕೂಲಿ ಕಾರ್ಮಿಕರು, ಉದ್ಯಮಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ದೇಶದ ಪ್ರತಿಯೊಬ್ಬ ಪ್ರಜೆಯ  ಬ್ಯಾಂಕ್‌ ಖಾತೆಗೆ ಹತ್ತು ಸಾವಿರ ರೂ. ಹಣ ಜಮಾ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಲೋಚನೆ ನಡೆಸಬೇಕಾಗಿದೆ ಎಂದರು. ನರೇಗಾ ಯೋಜನೆಯ ಕಾಮಗಾರಿಯಲ್ಲಿ ನಿಗದಿ ಪಡಿಸಿರುವ 150 ಮಾನವ ದಿನಗಳನ್ನು 200  ದಿನಗಳಿಗೆ ಹೆಚ್ಚಿಸಬೇಕು. ಕೂಲಿ ದರವನ್ನೂ ಹೆಚ್ಚಿಸುವುದು ಅಗತ್ಯವಾಗಿದೆ ಎಂದರು.

ಲಾಕ್‌ಡೌನ್‌ ಪರಿಣಾಮ ರೈತರು ಕಂಗಾಲಾಗಿದ್ದು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಖರೀದಿಗೆ ಸರ್ಕಾರ ಸಹಾಯಧನ ನೀಡಬೇಕು ಎಂದು  ಒತ್ತಾಯಿಸಿದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್‌ ಮಂಜುನಾಥ್‌ ಮಾತನಾಡಿ, ಜೂ.7ರಂದು ಬೆಂಗಳೂರಿನಲ್ಲಿ ನಡೆಯ ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣ ಸಮಾರಂಭವನ್ನು ರಾಜ್ಯದ ಎಲ್ಲಾ ಜಿಲ್ಲೆ,ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಪ್ರಮುಖ ಸ್ಥಳದಲ್ಲಿ ಸಾರ್ವಜನಿಕರು ವೀಕ್ಷಿ ಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ವೀಕ್ಷಕಿ ಕಮಲಾಕ್ಷಿ, ಮಾಜಿ ಶಾಸಕ ಸಿ.ಎಸ್‌. ಪುಟ್ಟೇಗೌಡ,  ಪ್ರಮುಖರಾದ ಎಂ.ಶಂಕರ್‌, ಎಚ್‌.ಸಿ. ವಿಜಯಕುಮಾರ್‌, ಲಿತಮ್ಮ, ಜೆ.ಎಂ.ರಾಮಚಂದ್ರ, ಎಚ್‌.ಸಿ.ಲಲಿತ್‌ರಾಘವ್‌, ಮಂಜೇಗೌಡ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next