ಧಾರವಾಡ: ಒತ್ತಡದ ಬದುಕಿನಿಂದ ಹೊರಬಂದು ಆಹಾರ, ವಿಹಾರ ಹಾಗೂ ವಿಚಾರಗಳಲ್ಲಿ ಬದಲಾವಣೆ ಮಾಡಿಕೊಂಡಾಗ ಮಾತ್ರ ಸದೃಢ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ| ಗಿರಿಧರ ಕುಕನೂರ ಹೇಳಿದರು.
ನಗರೇಶ್ವರ ಕಲ್ಯಾಣ ಮಂಟಪದಲ್ಲಿ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಹಾಗೂ ಸಕ್ಷಮ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೌಟುಂಬಿಕ ಹಾಗೂ ಸಾಮಾಜಿಕ ಒತ್ತಡದ ಬದುಕಿನಿಂದ ರಕ್ತದೊತ್ತಡ, ಮಧುಮೇಹ, ಹೃದಯ ರೋಗ ಸಂಬಂಧಿ ಕಾಯಿಲೆಗೆ ಅಣಿಯಾಗುತ್ತಿದ್ದಾರೆ. ಕಲುಷಿತ ಆಹಾರ ಸೇವನೆ, ಮಾನಸಿಕ ಒತ್ತಡ, ಮದ್ಯಪಾನ, ಧೂಮಪಾನ ಮತ್ತಿತರ ಚಟಗಳಿಂದ ಕಾಯಿಲೆಗೆ ಒಳಪಡುತ್ತಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯಕರ ಸುದ್ದಿಗಳನ್ನು ಪ್ರಸಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಅಧ್ಯಕ್ಷೆ ಡಾ| ಗೌರಿ ತಾವರಗೇರಿ ಮಾತನಾಡಿದರು. ಡಾ| ನೀತಾ ಸಾಂಬ್ರಾಣಿ, ಡಾ| ಗೌರಿ ಬೆಲ್ಲದ, ಡಾ| ನಾಡಗೌಡ, ಡಾ|ಉದಯ ಸಾಂಬ್ರಾಣಿ, ಡಾ| ಸತೀಶ ಇರಕಲ್, ಡಾ| ವಾಣಿ ಇರಕಲ್, ಡಾ|ಕೋಮಲ ಕುಲಕರ್ಣಿ, ಡಾ| ಸಂಧ್ಯಾ ಕುಲಕರ್ಣಿ, ಡಾ| ರಮ್ಯಾ ಸಿನೋಧ, ಡಾ| ಆನಂದ ತಾವರಗೇರಿ, ಸ್ನೇಹಾ ಮುಧೋಳಕರ, ಸುಮನ್ ಹೆಬ್ಳಿಕರ, ರೇಖಾ ಗುಪ್ತಾ, ಮಂಜುನಾಥ ಉಡಕೇರಿ ಇದ್ದರು. ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಹಾಗೂ ಡಾ| ಗಿರಿಧರ ಕುಕನೂರ ಅವರನ್ನು ಸನ್ಮಾನಿಸಲಾಯಿತು. ಅಭಿಷೇಕ ದೊಡಮನಿ ಹಾಗೂ ಗೌರಿ ಮಹೇಶ ನಿರೂಪಿಸಿದರು. ಗಿರಿಜಾ ಹಿರೇಮಠ ಸ್ವಾಗತಿಸಿದರು. ಅನನ್ಯ ದೊಡಮನಿ ವಂದಿಸಿದರು.