Advertisement
125,000 ಡಾಲರ್ ಬಹುಮಾನದ ಡಬ್ಲ್ಯುಟಿಎ ಮುಂಬೈ ಓಪನ್ ಟೆನಿಸ್ ನ. 18ರಿಂದ 26ರ ತನಕ “ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ’ (ಸಿಸಿಐ) ಅಂಗಳದಲ್ಲಿ ನಡೆಯಲಿದೆ.33ರ ಹರೆಯದ ವೆರಾ ಚ್ವೊನರೇವಾ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಗೈದಿದ್ದಾರೆ. 2010ರ ವಿಂಬಲ್ಡನ್ ಮತ್ತು ಯುಎಸ್ ಓಪನ್ ಟೆನಿಸ್ ಕೂಟದಲ್ಲಿ ರನ್ನರ್ ಅಪ್ ಆಗಿದ್ದರು. 2012ರ ಬಳಿಕ ನಾನಾ ಗಾಯದ ಸಮಸ್ಯೆಯಿಂದಾಗಿ ಚ್ವೊನರೇವಾ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಸರಿಯಬೇಕಾಯಿತು. ಈಗ ಚ್ವೊನರೇವಾ ಒಂದು ಮಗುವಿನ ತಾಯಿಯೂ ಆಗಿದ್ದು, ಈ ವರ್ಷ ಮತ್ತೆ ಟೆನಿಸ್‌ಗೆ ಮರಳುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ ಕಾರ್ಯದರ್ಶಿ ಸುಂದರ್ ಅಯ್ಯರ್ ಅವರು ಚ್ವೊನರೇವಾ ಆಗಮನವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಬೆಲರೂಸ್‌ನ 19ರ ಹರೆಯದ ಅರಿನಾ ಸಬಲೆಂಕಾ ಈ ಕೂಟದ ಅಗ್ರ ಶ್ರೇಯಾಂಕಿತ ಆಟಗಾರ್ತಿಯಾಗಿದ್ದಾರೆ. ಹಿಂದೊಮ್ಮೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 12ನೇ ಸ್ಥಾನ ಅಲಂಕರಿಸಿದ್ದ ಬೆಲ್ಜಿಯಂನ ಯಾನಿನಾ ವಿಕ್‌ವೆುàಯರ್ ಕೂಡ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಚೀನದ ಝು ಲಿನ್ (105), ರಶ್ಯದ ಆರಿನಾ ರೊಡಿಯೊನೋವಾ (117), ಬ್ರಿಟನ್ನಿನ ನವೊಮಿ ಬ್ರಾಡಿ (120), ಸ್ಲೊವಾಕಿಯಾದ ಅನ್ನಾ ಶಿಮಿಡೊÉàವಾ (132), ಇಟಲಿಯ ಜಾಸ್ಮಿನ್ ಪೌಲಿನಿ (136), ಆಸ್ಟ್ರಿಯಾದ ಫೈತ್ ಕಾಬ್ರೆರಾ (137ನೇ ರ್‍ಯಾಂಕಿಂಗ್) ಮೊದಲಾವರೆಲ್ಲ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
Related Articles
ಭಾರತದ ನಾಲ್ವರು ಆಟಗಾರ್ತಿಯರಿಗೆ ಪ್ರಧಾನ ಸುತ್ತಿನ ವೈಲ್ಡ್‌ಕಾರ್ಡ್ ಲಭಿಸಿದ್ದು, ಇಬ್ಬರು ಅರ್ಹತಾ ಸುತ್ತಿನಲ್ಲಿ ಸೆಣಸಲಿದ್ದಾರೆ. ಪ್ರಧಾನ ಸುತ್ತಿಗೆ ನೇರ ಅವಕಾಶ ಪಡೆದವರೆಂದರೆ, ದೇಶದ ಹಾಲಿ ನಂ.1 ಆಟಗಾರ್ತಿ ಕರ್ಮನ್ ಕೌರ್ ಥಾಂಡಿ, ಮಾಜಿ ನಂ.1 ಆಟಗಾರ್ತಿ ಅಂಕಿತಾ ರೈನಾ, ಮಹಾರಾಷ್ಟ್ರದ ನಂ.1 ಆಟಗಾರ್ತಿ ಋತುಜಾ ಭೋಂಸ್ಲೆ ಮತ್ತು ಜೂನಿಯರ್ ಆಟಗಾರ್ತಿ ಝೀಲ್ ದೇಸಾಯಿ.
Advertisement
“ವನಿತಾ ಟೆನಿಸ್ ರ್‍ಯಾಂಕಿಂಗ್‌ನಲ್ಲಿ ಭಾರತದ ಆಟಗಾರ್ತಿಯರು ನಿರಂತರ ಪ್ರಗತಿ ಸಾಧಿಸುತ್ತಿದ್ದಾರೆ. ಈ ಪಂದ್ಯಾವಳಿ ಮುಂದಿನ ಹಂತಕ್ಕೆ ಅಗತ್ಯವಾಗಿ ಬೇಕಾದ ಅಡಿಪಾಯವನ್ನು ನಿರ್ಮಿಸಿ ಕೊಡಲಿದೆ’ ಎಂದು ಕೂಟದ ಸಂಘಟನಾ ಸಮಿತಿಯ ಅಧ್ಯಕ್ಷೆ ಅಮೃತಾ ಫಡ್ನವೀಸ್ ಹೇಳಿದರು.
ಬಹುಮಾನಗಳ ವಿವರವನಿತಾ ಸಿಂಗಲ್ಸ್ ಪ್ರಶಸ್ತಿ ವಿಜೇತರಿಗೆ 20 ಸಾವಿರ ಡಾಲರ್ ಜತೆಗೆ 160 ಡಬ್ಲ್ಯುಟಿಎ ಅಂಕ, ರನ್ನರ್ ಅಪ್‌ಗೆ 11 ಸಾವಿರ ಡಾಲರ್ ಮತ್ತು 95 ಅಂಕ ಲಭಿಸಲಿದೆ. ಡಬಲ್ಸ್ ವಿಜೇತರಿಗೆ 5,500 ಡಾಲರ್ ಮತ್ತು 160 ಅಂಕ, ಪೈನಲ್‌ನಲ್ಲಿ ಸೋತವರಿಗೆ 2,700 ಡಾಲರ್ ಮತ್ತು 95 ಅಂಕ ದೊರೆಯಲಿದೆ. ಅರ್ಹತಾ ಸುತ್ತಿನ ಪಂದ್ಯಗಳು ನ. 18 ಮತ್ತು 19ರಂದು ನಡೆದರೆ, ಪ್ರಧಾನ ಸುತ್ತಿನ ಸ್ಪರ್ಧೆಗಳು ನ. 20ರಿಂದ ಆರಂಭವಾಗಲಿವೆ. ಮೊದಲ 3 ದಿನ ಮಧ್ಯಾಹ್ನ 2.30ರಿಂದ, ಬಳಿಕ ಸಂಜೆ 4 ಗಂಟೆಯಿಂದ ಸ್ಪರ್ಧೆಗಳು ನಡೆಯಲಿವೆ. ಸಿಸಿಐ 2007ರ ಬಳಿಕ ಮೊದಲ ಬಾರಿಗೆ ದೊಡ್ಡ ಮಟ್ಟದ ಟೆನಿಸ್ ಪಂದ್ಯಾವಳಿಯನ್ನು ಆಯೋಜಿಸಲಿದೆ. ಅಂದು ಎಟಿಪಿ ಟೂರ್ನಿ ಇಲ್ಲಿ ನಡೆದಿತ್ತು.