Advertisement

Madhya Pradesh: ವಿಧಾನಸಭೆಗೆ ಕೇಂದ್ರದ ಮಾಜಿ ಸಚಿವ ತೋಮರ್‌ ಸ್ಪೀಕರ್‌

12:41 AM Dec 21, 2023 | Team Udayavani |

ಭೋಪಾಲ್‌: ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌ ಅವರು ಬುಧವಾರ ಮಧ್ಯಪ್ರದೇಶ ವಿಧಾನಸಭೆಯ ಸ್ಪೀಕರ್‌ ಆಗಿ ಅವಿರೋಧವಾಗಿ ನೇಮಕಗೊಂಡಿದ್ದಾರೆ. ನೂತನವಾಗಿ ಆಯ್ಕೆಯಾದ ಸರಕಾರದ ಮೊದಲ ವಿಧಾನಸಭೆ ಅಧಿವೇಶನವು ಸೋಮವಾರ ಆರಂಭಗೊಂಡಿದ್ದು, ಬುಧವಾರ ತೋಮರ್‌ರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಮಂಡಿಸಲಾಗಿತ್ತು.

Advertisement

ಧ್ವನಿ ಮತದ ಮೂಲಕ ಅದಕ್ಕೆ ಅಂಗೀಕಾರ ದೊರೆತ ಬಳಿಹ ಹಂಗಾಮಿ ಸ್ಪೀಕರ್‌ ಗೋಪಾಲ್‌ ಭಾರ್ಗವ್‌ ಅವರು ನರೇಂದ್ರ ಸಿಂಗ್‌ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next