Advertisement

ಮಾಜಿ ಕೇಂದ್ರ ಸಚಿವ, ಸಂಸದ ಇ.ಅಹ್ಮದ್‌ ವಿಧಿವಶ

08:41 AM Feb 01, 2017 | Team Udayavani |

 ಹೊಸದಿಲ್ಲಿ : ನಿನ್ನೆ ಸಂಸತ್‌ನಲ್ಲಿ ರಾಷ್ಟ್ರಪತಿ ಭಾಷಣದ ವೇಳೆ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಹಿರಿಯ ನಾಯಕ, ವಿದೇಶಾಂಗ ಖಾತೆಯ ಮಾಜಿ ರಾಜ್ಯ ಸಚಿವ ,ಮಲಪ್ಪುರಂ ಕ್ಷೇತ್ರದ ಸಂಸದ ಇ.ಅಹ್ಮದ್‌ ಅವರು ಬುಧವಾರ ಚಿಕಿತ್ಸೆ ಫ‌ಲಕಾರಿಯಾಗದೆ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ  ಬುಧವಾರ ನಸುಕಿನ 2 ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 78 ವರ್ಷ ಪ್ರಾಯವಾಗಿತ್ತು. 

Advertisement

ಹೃದಯಾಘಾತ ದಿಂದ ಅಹ್ಮದ್‌ ಅವರು ಕುಸಿತು ಬಿದ್ದಿದ್ದು ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆ  ಸ್ಪಂದಿಸದೆ ಕೊನೆ ಉಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ಕಾಂಗ್ರೆಸ್‌ ನಾಯಕರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. 

ಬಜೆಟ್‌ ಮಂಡನೆ ಮುಂದೂಡಿಕೆ ? 

ಇ.ಅಹ್ಮದ್‌ ಅವರ ನಿಧನದ ಹೊರತಾಗಿಯೂ ಬಜೆಟ್‌ ನಿಗದಿಯಂತೆ ನಡೆಯಲಿದೆ. ಮಧ್ಯ ರಾತ್ರಿಯೆ ಬಜೆಟ್‌ ಪ್ರತಿಗಳು ಮುದ್ರಣಗೊಂಡಿರುವ ಹಿನ್ನಲೆಯಲ್ಲಿ ಬಜೆಟ್‌ ಇಂದೆ ಮಂಡನೆಯಾಗಲಿದೆ ಎಂದು ವರದಿಯಾಗಿದೆ. 

Advertisement

ಸಂಸತ್‌ನಲ್ಲಿ ಇ.ಆಹ್ಮದ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಬಜೆಟ್‌ ಬಜೆಟ್‌ ಮಂಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಹಾಲಿ ಸಂಸದರೊಬ್ಬರು ಮೃತಪಟ್ಟರೆ ಅಂದಿನ ಕಲಾಪವನ್ನು ಶೃದ್ಧಾಂಜಲಿ ಸಲ್ಲಿಸಿ ಮುಂದೂಡುವ ಕ್ರಮ. ಆದರೆ ಬಜೆಟ್‌ ಗೌಪ್ಯತೆಯ ವಿಚಾರವಾಗಿರುವ ಹಿನ್ನಲೆಯಲ್ಲಿ ಇಂದೇ ಮಂಡನೆಯಾಗಲಿದೆ ಎಂದು ಹೇಳಲಾಗಿದೆ. 

ಈಗಾಗಲೇ (9 ಗಂಟೆಯ ವೇಳೇಗೆ ) ಅರುಣ್‌ ಜೇಟ್ಲಿ ಅವರು ಸಂಸತ್‌ ಪ್ರವೇಶಿಸಿದ್ದಾರೆ.ವಿತ್ತ ಸಚಿವಾಲಯದಲ್ಲಿ ಹಣಕಾಸು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಬಜೆಟ್‌ ಪ್ರತಿಗಳಿರುವ ಸೂಟ್‌ಕೇಸನ್ನು ಮಾಧ್ಯಮಗಳಿಗೆ ತೋರಿಸಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಭೇಟಿಗಾಗಿ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next