ಅಬುಧಾಬಿ: ಯುಎಇ ಕ್ರಿಕೆಟ್ ತಂಡದ ಮಾಜಿ ನಾಯಕ ಅಮ್ಜದ್ ಜಾವೇದ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.
38ರ ಹರೆಯದ ಜಾವೇದ್ ಯುಎಇ ಪರ 15 ಏಕದಿನ ಹಾಗೂ 22 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಕಳೆದ ಡಿಸೆಂಬರ್‌ನಲ್ಲಿ ನೇಪಾಲ ವಿರುದ್ಧ ತಮ್ಮ ಕೊನೆಯ “ಲಿಸ್ಟ್ ಎ’ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.
“ವಿದಾಯ ಹೇಳುವುದು ಅಷ್ಟು ಸುಲಭವಲ್ಲ. ಆದರೆ ಇದು ಅನಿವಾರ್ಯ. ಮುಂದೆ ನಾನು ವೀಕ್ಷಕನಾಗಿ ಹಾಗೂ ಯುಎಇ ತಂಡದ ಅಭಿಮಾನಿಯಾಗಿ ಪಂದ್ಯವನ್ನು ವೀಕ್ಷಿಸಲಿದ್ದೇನೆ’ ಎಂದು ಅಮ್ಜದ್ ಜಾವೇದ್ ಟ್ವೀಟ್ ಮಾಡಿದ್ದಾರೆ.
2014ರ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಕೀನ್ಯಾ ವಿರುದ್ಧ 31 ಎಸೆತಗಳಿಂದ 63 ರನ್ ಬಾರಿಸುವುದರ ಜತೆಗೆ 2 ವಿಕೆಟ್ ಕೂಡ ಉರುಳಿಸುವ ಮೂಲಕ ಜಾವೇದ್ ಸುದ್ದಿಯಾಗಿದ್ದರು. ಇಲ್ಲಿ ಸಾಧಿಸಿದ 13 ರನ್ ಜಯದಿಂದ ಯುಎಇ ತಂಡ ಸ್ಕಾಟ್ಲೆಂಡ್ ವಿರುದ್ಧ ಫೈನಲ್ ಆಡುವ ಅವಕಾಶ ಪಡೆಯಿತಷ್ಟೇ ಅಲ್ಲ, ಪೂರ್ಣ ಪ್ರಮಾಣದ ಏಕದಿನ ಮಾನ್ಯತೆಯನ್ನೂ ಸಂಪಾದಿಸಿತು.
2015ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಆಡಿದ ಜಾವೇದ್, ಆರಂಭಿಕನಾಗಿ ಇಳಿದು 45 ರನ್ ಹೊಡೆಯುವ ಜತೆಗೆ 3 ವಿಕೆಟ್ ಕೂಡ ಉರುಳಿಸಿದ್ದರು.