Advertisement
ಅದರಲ್ಲೂ ನಮ್ಮ ದೇಶದಲ್ಲಿ ಟಿಕ್ ಟಾಕ್ ಬ್ಯಾನ್ ಆದ ನಂತರವಂತೂ ಟಿಕ್ ಟಾಕ್ ಸ್ಟಾರ್ ಗಳು ನಿರುದ್ಯೋಗಿಗಳಾಗಿಬಿಟ್ಟಿದ್ದಾರೆ.
Related Articles
Advertisement
ಇನ್ನು ಉತ್ತರಪ್ರದೇಶದ ಫೇಮಸ್ ಟಿಕ್ ಟಾಕ್ ಸ್ಟಾರ್ ಸಚಿನ್ ತಿವಾರಿ, ನಟ ಸುಶಾಂತ್ ಸಿಂಗ್ ಜೀವನದಿಂದ ಪ್ರೇರಿತ ‘ಸೂಸೈಡ್ ಆರ್ ಮರ್ಡರ್ : ಎ ಸ್ಟಾರ್ ವಾಸ್ ಲಾಸ್ಟ್’ ಎಂಬ ಚಿತ್ರವೊಂದರಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ವಿಶಾಲ್ ಪಾರೇಖ್ ಎಂಬ ಇನ್ನೊಬ್ಬ ಟಿಕ್ ಟಾಕ್ ಸ್ಟಾರ್ ಗುಜರಾತ್ ಭಾಷೆಯ ವೆಬ್ ಶೋ ‘ಪ್ರೇಮ್ ಪೂಜಾ’ದ ಮೂಲಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
ಇದನ್ನೂ ಓದಿ: ಮೊಬೈಲ್ ಕದ್ದ ಕಳ್ಳರನ್ನು ಬೆನ್ನಟ್ಟಿ ಸೆರೆ ಹಿಡಿದ ಮಹಿಳಾ ಪತ್ರಕರ್ತೆ
ಕೋವಿಡ್ 19 ಕಾಲ ಘಟ್ಟದ ಬಳಿಕ ಕಂಟೆಂಟ್ ಕ್ರಿಯೇಟರ್ಸ್ ಇದೀಗ ಆನ್ ಲೈನ್ ಪ್ಲ್ಯಾಟ್ ಫಾರಂಗಳಲ್ಲಿ ಜನರಿಗೆ ಪರಿಚಯವಿರುವ ಮುಖಗಳನ್ನೇ ಮನರಂಜನಾ ಕ್ಷೇತ್ರದಲ್ಲಿ ಅವಕಾಶ ನೀಡಲು ಮನಸ್ಸು ಮಾಡುತ್ತಿರುವುದು ಈ ಟಿಕ್ ಟಾಕ್ ಸ್ಟಾರ್ ಗಳಿಗೆ ಬೇಡಿಕೆ ಕುದುರಲು ಕಾರಣವಾಗಿದೆ.
ಡಿಜಿಟಲ್ ಮೀಡಿಯಾ ಕ್ಷೇತ್ರವು ಶೀಘ್ರ ಜನಸ್ಪಂದನೆ ಬಯಸುವ ಕ್ಷೇತ್ರಗಳಲ್ಲಿ ಒಂದಾಗಿದೆ ಮತ್ತು ಇವುಗಳಲ್ಲಿ ಯಾವುದೇ ಒಂದು ವಿಷಯ ವಿಭಿನ್ನವಾಗಿದ್ದು ನೆಟ್ ಬಳಕೆದಾರರ ಗಮನ ಸೆಳೆಯುವಂತಿದ್ದಲ್ಲಿ ಅಂತಹ ವಿಷಯಗಳು ತಕ್ಷಣವೇ ವೈರಲ್ ಆಗಿಬಿಡುತ್ತವೆ.
ಹಾಗಾಗಿ, ಈಗಾಗಲೇ ನೆಟ್ ಲೋಕದಲ್ಲಿ ಒಂದು ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಟಿಕ್ ಟಾಕ್ ಸ್ಟಾರ್ ಗಳನ್ನೇ ಹಾಕಿಕೊಂಡು ಚಿತ್ರಗಳನ್ನು ಅಥವಾ ವೆಬ್ ಸಿರೀಸ್ ಗಳನ್ನು ನಿರ್ಮಾಣ ಮಾಡಿದಲ್ಲಿ ಅವರ ಅಭಿಮಾನಿ ವರ್ಗವನ್ನು ಸುಲಭವಾಗಿ ತಲುಪಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದಿದೆ ಎನ್ನುತ್ತಾರೆ ಆಲ್ಟ್ ಬಾಲಾಜಿಯ ಸಿಇಒ ನಚಿಕೇತ್ ಪಂತ್ ವೈದ್ಯ.
ಇದನ್ನೂ ಓದಿ: ಕೋವಿಡ್ 19 ವಾರಿಯರ್ಸ್ ಗೆ ವಿಶೇಷ ಡೂಡಲ್ ಮೂಲಕ ಗೂಗಲ್ ಅಭಿನಂದನೆಇನ್ನು, ಈ ಟಿಕ್ ಟಾಕ್ ಸ್ಟಾರ್ ಗಳನ್ನು ಜನ ಸುಲಭವಾಗಿ ಗುರುತಿಸುತ್ತಾರೆ ಮತ್ತು ಕೆಲವೊಮ್ಮೆ ಇವರ ಜನಪ್ರಿಯತೆ ಯೂಟ್ಯೂಬರ್ ಗಳಿಗಿಂತಲೂ ಹೆಚ್ಚಿನ ಮಟ್ಟದಲ್ಲಿರುತ್ತದೆ ಎನ್ನುತ್ತಾರೆ ಓರ್ ಮ್ಯಾಕ್ಸ್ ಮೀಡಿಯಾ ಕನ್ಸೆಲ್ಟಿಂಗ್ ಫರ್ಮ್ ನ ಸಿಇಒ ಶೈಲೇಶ್ ಕಪೂರ್ ಅವರು. ಇವೆಲ್ಲ ಅಂಶಗಳಿಗಿಂತ ಹೆಚ್ಚಾಗಿ, ಸಂಭಾವನೆ ವಿಚಾರದಲ್ಲೂ ಈ ಟಿಕ್ ಟಾಕ್ ಸ್ಟಾರ್ ಗಳು ದುಬಾರಿಯೇನಲ್ಲ. ಈಗಾಗಲೇ ಒಂದು ಹಂತಕ್ಕೆ ಜನಪ್ರಿಯತೆಯನ್ನು ಹೊಂದಿರುವ ನಟ ನಟಿಯರು ಪ್ರತೀ ವೆಬ್ ಶೋ ಎಪಿಸೋಡ್ ಗೆ 25 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಆದರೆ, ಟಿಕ್ ಟಾಕ್ ಸ್ಟಾರ್ ಗಳು 1-2 ಲಕ್ಷ ರೂಪಾಯಿಗಳ ರೇಂಜ್ ನಲ್ಲಿ ಲಭ್ಯರಾಗುವುದೂ ಸಹ ನಿರ್ಮಾಣ ಸಂಸ್ಥೆಗಳು ಟಿಕ್ ಟಾಕ್ ಸ್ಟಾರ್ ಗಳ ಕಡೆಗೆ ಒಲವು ತೋರಿಸಲು ಕಾರಣವಾಗಿದೆ.