ಉಡುಪಿ: ನಿವೃತ್ತ ಸೇನಾಧಿಕಾರಿ, ಸಮಾಜ ಸೇವಕ ಕರ್ನಲ್ ರಾಮಚಂದ್ರ ರಾವ್ ( 88 ವರ್ಷ) ಸೋಮವಾರ ನಿಧನ ಹೊಂದಿದರು.
ಭಾರತೀಯ ಭೂಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಪಡೆದು 1962ರ ಚೀನಾ, 1967ರ ಪಾಕಿಸ್ತಾನದೊಂದಿಗಿನ ಯುದ್ಧ ಹಾಗೂ 1972ರ ಬಾಂಗ್ಲಾ ವಿಮೋಚನೆಯ ಕಾರ್ಯಾಚರಣೆಯಲ್ಲಿ ಭಾಗವಹಿಸಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ನಿವೃತ್ತಿಯ ಬಳಿಕ ಉಡುಪಿಗೆ ಬಂದು ಮಾಜಿ ಸೈನಿಕರ ವೇದಿಕೆ, ಪೂರ್ಣಪ್ರಜ್ಞಾ ಕಾಲೇಜಿನ ಆಡಳಿತ ಮಂಡಳಿ, ಶ್ರೀಕೃಷ್ಣ ಬಾಲನಿಕೇತನ, ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ‘ನವೀನ್ ಪೇಜಾವರ ಟ್ರಸ್ಟ್’ ಮೂಲಕ ಬಡವರಿಗೆ ಆಸರೆಯಾಗಿದ್ದರು.
ಇದನ್ನೂ ಓದಿ:ಮರವೂರು ಸೇತುವೆ ಬಿರುಕು: ಬಜಪೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಇಲ್ಲಿದೆ ರಸ್ತೆ ಮಾಹಿತಿ
2017ರಲ್ಲಿ ಪತ್ನಿ ಮಾಲತಿ ರಾವ್ ರೊಂದಿಗೆ ಇವರಿಗೆ ಯಕ್ಷಗಾನ ಕಲಾರಂಗ ಎಸ್. ಗೋಪಾಲಕೃಷ್ಣರ ಸಂಸ್ಮರಣಾ ‘ಸೇವಾಭೂಷಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಮೃತರು ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ರಾಮಚಂದ್ರ ರಾವ್ ಅವರ ನಿಧನಕ್ಕೆ ಶಾಸಕ ಕೆ.ರಘುಪತಿ , ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.