Advertisement

“ಸಾರೆಗಾಮಾಪಾ’ಮಾಜಿ ಸ್ಪರ್ಧಿ, ಪಾಕ್‌ ಗಾಯಕ ಝೈನ್‌ ಅಲಿ ನಿಗೂಢ ಸಾವು

10:55 AM Jul 24, 2017 | udayavani editorial |

ಲಾಹೋರ್‌: ಉದಯೋನ್ಮುಖ ಪಾಕ್‌ ಗಾಯಕ ಹಾಗೂ “ಸಾರೆಗಾಮಾಪಾ’ ಸ್ಪರ್ಧೆಯ ಮಾಜಿ ಸ್ಪರ್ಧಿ ಝೈನ್‌ ಅಲಿ ಅವರು ಲಾಹೋರ್‌ನಲ್ಲಿನ ತನ್ನ ಸ್ನೇಹಿತರ ಮನೆಯಲ್ಲಿ ನಿಗೂಢ ಸನ್ನಿವೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

Advertisement

ಟೈಮ್ಸ್‌ ಆಫ್ ಇಂಡಿಯಾ ಡಾಟ್‌ ಕಾಮ್‌ ಪ್ರಕಾರ ಝೈನ್‌ ಅವರು ಕಳೆದ ಜು.20ರಂದು ಲಾಹೋರ್‌ನ ಶೇಖಾಪುರದಲ್ಲಿನ ತನ್ನ ಸ್ನೇಹಿತರ ಮನೆಗೆ ಹೋಗಿದ್ದರು. ಅನಂತರದಲ್ಲಿ ಅವರ ಶವ ಶೌಚಾಲಯದಲ್ಲಿ ಪತ್ತೆಯಾಗಿತ್ತು. 

ಝೈನ್‌ ಅವರ ನಿಗೂಢ ಸಾವಿನ ಕುರಿತ ತನಿಖೆ ನಡೆಯುತ್ತಿದೆ. ಝೈನ್‌ ಅವರ ಸಹೋದರ ಮಾಧ್ಯಮದೊಂದಿಗೆ ಮಾತನಾಡುತ್ತಾ “ನನ್ನ ತಮ್ಮನಿಗೆ ಯಾರ ವಿರುದ್ಧವೂ ದ್ವೇಷ, ವೈಷಮ್ಯ ಇರಲಿಲ್ಲ. ಉದಯೋನ್ಮುಖ ಗಾಯಕನಾಗಿದ್ದ ಆತ ಸದ್ಯದಲ್ಲೇ ಸಿನೆಮಾಗೆ ಹಾಡುವವನಿದ್ದ’ ಎಂದು ಹೇಳಿದ್ದಾರೆ. 

ಝೈನ್‌ ಅವರು 2012ರಲ್ಲಿ ಪ್ರಸಿದ್ಧ ಟಿವಿ ಸಂಗೀತ ಕಾರ್ಯಕ್ರಮವಾಗಿದ್ದ “ಸಾರೆಗಾಮಾಪಾ’ದಲ್ಲಿ ಸ್ಪರ್ಧಿಸಿ ತನ್ನ ಹಾಡುಗಾರಿಕೆಯ ಅನನ್ಯತೆಗೆ ಭಾರೀ ಮೆಚ್ಚುಗೆ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next