Advertisement

ಕೋವಿಡ್-19 ಮಹಾಮಾರಿಗೆ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೋರೆನ್ ಝ್ ಸಾವು

11:51 AM Mar 27, 2020 | Nagendra Trasi |

ಸ್ಪೇನ್: ಕೋವಿಡ್-19 ವೈರಸ್ ಮಹಾಮಾರಿ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೆ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೋರೆನ್  ಝೋ ಸ್ಯಾನ್ಝ್ (76ವರ್ಷ) ಸಾವನ್ನಪ್ಪಿರುವುದಾಗಿ ಪುತ್ರ ಭಾನುವಾರ ತಿಳಿಸಿದ್ದಾರೆ.

Advertisement

ರಿಯಲ್ ಮ್ಯಾಡ್ರಿಡ್ ಮೂಲದ ಸ್ಪೇನ್ ಫುಟ್ಬಾಲ್ ಕ್ಲಬ್ ಇದಾಗಿದೆ. 1995ರಿಂದ 2000ವರೆಗೆ ಸ್ಯಾನ್ಝ್ ಫುಟ್ಬಾಲ್ ಕ್ಲಬ್ ನ  ಅಧ್ಯಕ್ಷರಾಗಿದ್ದರು. ನನ್ನ ತಂದೆ ವಿಧಿವಶರಾಗಿದ್ದಾರೆ, ಇದೊಂದು ಆಘಾತಕಾರಿ ವಿಷಯ ಎಂದು ಪುತ್ರ ಲೋರೆ ನ್ ಝೋ ಸ್ಯಾನ್ಝ್ ಜ್ಯೂನಿಯರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೋವಿಡ್-19 ವೈರಸ್ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ವಿಧಿವಶರಾಗಿದ್ದರು ಎಂದು ಜ್ಯೂನಿಯರ್ ಸ್ಯಾನ್ಝ್ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ. ಸ್ಪೇನ್  ನಲ್ಲಿ ಕೋವಿಡ್ 19ಗೆ 1,300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next