Advertisement

ಪ್ರಪಾತಕ್ಕೆ ಬಿದ್ದು ಸಾವಿಗೀಡಾದ ಮಾಜಿ ಕ್ರಿಕೆಟಿಗ ಗಾವ್ಳಿ

12:45 PM Sep 03, 2020 | keerthan |

ನಾಸಿಕ್‌: ಮಹಾರಾಷ್ಟ್ರದ ಮಾಜಿ ರಣಜಿ ಕ್ರಿಕೆಟಿಗ ಶೇಖರ್‌ ಗಾವ್ಳಿ ದುರಂತ ಸಾವಿಗೀಡಾಗಿದ್ದಾರೆ. 45 ವರ್ಷದ ಅವರು ಪಶ್ಚಿಮ ಘಟ್ಟಕ್ಕೆ ಟ್ರೆಕಿಂಗ್‌ ಹೋದ ವೇಳೆ 250 ಅಡಿ ಆಳದ ಪ್ರಪಾತಕ್ಕೆ ಬಿದ್ದು ದುರ್ಮರಣಕ್ಕೀಡಾದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಶೇಖರ್‌ ಗಾವ್ಳಿ ಕೆಲವು ಗೆಳೆಯರೊಂದಿಗೆ ನಾಸಿಕ್‌ ಜಿಲ್ಲೆಯ ಇಗತ್‌ಪುರಿ ಗಿರಿಧಾಮಕ್ಕೆ ಟ್ರೆಕಿಂಗ್‌ಗೆ ಹೋದಾಗ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದರು. ಬುಧವಾರ ಬೆಳಗ್ಗೆ ಅವರ ಮೃತದೇಹ ಪತ್ತೆಯಾಯಿತು.

ಬಲಗೈ ಬ್ಯಾಟ್ಸ್‌ಮನ್‌ ಹಾಗೂ ಲೆಗ್‌ಸ್ಪಿನ್‌ ಬೌಲರ್‌ ಆಗಿದ್ದ ಗಾವ್ಳಿ 2 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದರು. ಬಳಿಕ ಮಹಾರಾಷ್ಟ್ರ ಕ್ರಿಕೆಟ್‌ ತಂಡದ ಸಹಾಯಕ ಕೋಚ್‌ ಆಗಿ ಕರ್ತವ್ಯ ನಿಭಾಯಿಸಿದ್ದರು. ಪ್ರಸ್ತುತ ತವರು ತಂಡದ ಫಿಟ್‌ನೆಸ್‌ ಟ್ರೇನರ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next