Advertisement

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ರೈತರಿಂದ ಪ್ರತಿಭಟನೆ

05:56 PM Sep 17, 2020 | sudhir |

ರಾಣಿಬೆನ್ನೂರ: ತಾಲೂಕಿನ ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಗೊಪ್ಪ ಗ್ರಾಮದ ನಿಟ್ಟೂರ ರಸ್ತೆಯಿಂದ ಕೋಣನತಲೆ ಗ್ರಾಮಗಳ ನಡುವಿನ ರೈತ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು.

Advertisement

ನಿಟ್ಟೂರ ಗ್ರಾಮದ ಕೆಲವರು ತಕರಾರು ತೆಗೆದ ಹಿನ್ನೆಲೆಯಲ್ಲಿ ರತರ ಅನುಕೂಲಕ್ಕಾಗಿ ನಿರ್ಮಿಸುತ್ತಿರುವ ಸಂಪರ್ಕ ರಸ್ತೆ ಅಪೂರ್ಣವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಮೂಲಕ ರೈತರು ಹೊಲಗಳಿಗೆ ಹೋಗಲು ಅನುಕೂಲ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.

ನರೇಗಾ ಯೋಜನೆಯಡಿ ಒಟ್ಟು 8.50 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ಬಿಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಕೋಣನತಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರೈತರ ಹೊಲಗಳಿಗೆ ತೆರಳು ಹೆಚ್ಚು ಅನುಕೂಲವಾಗಲಿದೆ.

ಪ್ರಸ್ತುತ ಕಾಮಗಾರಿಯನ್ನು ತಡೆಹಿಡಿದ ಕಾರಣ ರೈತರು ತಮ್ಮ ತಮ್ಮ ಜಮೀನುಗಳಿಗೆ ಸಾಗಲು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೂಡಲೇ, ತಾಲೂಕು ಆಡಳಿತ ಸಮಸ್ಯೆಯನ್ನು ಪರಿಹರಿಸಲು ಮಧ್ಯೆ ಪ್ರವೇಶಿಸಬೇಕು ಮತ್ತು ಸರಳವಾಗಿ ಯಾವುದೇ ವಿವಾದವಿಲ್ಲದಂತೆ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ರೈತರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಬೀರಪ್ಪ ಚೌಡಣ್ಣನವರ, ಈ ರಸ್ತೆ ಸುಗಮ ಸಂಚಾರಕ್ಕಾಗಿಯೇ ನರೇಗಾ ಯೋಜನೆಯಡಿ ನಡೆಯುತ್ತಿದೆ. ಆದಷ್ಟು ಬೇಗನೆ ಪೂರ್ಣಗೊಳಿಸುವ ವಿಶ್ವಾಸ ತಮ್ಮದಾಗಿದೆ. ಗ್ರಾಮದ ಕೆಲವರ ಆಕ್ಷೇಪಣೆಯಿಂದಾಗಿ ತಾತ್ಕಾಲಿಕವಾಗಿ ತಡೆಯುಂಟಾಗಿದೆ. ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದೇವೆ ಎಂದು ತಿಳಿಸಿದರು.

Advertisement

ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ ಮಾತನಾಡಿ, ನಮ್ಮ ಹೊಲ-ನಮ್ಮ ರಸ್ತೆ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿದೆ.

ಇದನ್ನು ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ರಸ್ತೆ ಸಂಪರ್ಕ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಾಗಿದೆ. ಈ ಯೋಜನೆಯಲ್ಲಿ ಕಾಮಗಾರಿ ಆರಂಭವಾದರೆ ಯಾವುದೇ ಕಾರಣಕ್ಕೂ ಅದನ್ನು ಯಾವುದೇ ರೈತರಿಗೆ ಪ್ರಶ್ನಿಸುವ ಹಕ್ಕಿಲ್ಲ. ಮೊದಲು ಈ ಕಾಮಗಾರಿ ಪೂರ್ಣಗೊಳ್ಳಲಿ. ವಿವಾದ ಏನೇ ಇದ್ದರೂ ನಾವೆಲ್ಲರೂ ಸೇರಿ ಪರಸ್ಪರ ಹೊಂದಾಣಿಕೆಯೊಂದಿಗೆ ಬಗೆಹರಿಸಿಕೊಂಡು ಸಾಗಬೇಕು. ಇದು ನಮ್ಮ ರೈತ ಸಮುದಾಯಕ್ಕೆ ಅನುಕೂಲವಾಗುವ ವ್ಯವಸ್ಥೆಯಾಗಿದೆ. ಯಾರೂ ಅಡೆತಡೆ ಮಾಡಲು ಮುಂದಾಗಬಾರದು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಬಿಲ್ಲಹಳ್ಳಿ, ಹಾರೋಗೊಪ್ಪ, ಕೋಣನತಲೆ ಗ್ರಾಮದ ಕೃಷಿಕರು ಮತ್ತು ರೈತ ಮುಖಂಡರಾದ ಹನುಮಂತಪ್ಪ ಚೌಡಣ್ಣನವರ, ರುದ್ರಪ್ಪ ಸಾವಜ್ಜಿ, ಭೀಮರಜ್ಜ ಚೌಡಣ್ಣನವರ, ದುರಗಪ್ಪ ಮುಷ್ಟೂರ, ಶಿವಾನಂದ ಮಲ್ಲಾಡದ, ಮಂಜು ಚೌಡಣ್ಣನವರ, ಹನುಮಂತಪ್ಪ ಅಗಸಿಬಾಗಿಲ, ದುರಗಪ್ಪ ಮಲ್ಲಾಡದ, ಪರಮೇಶಪ್ಪ ಪೂಜಾರ, ಸುರೇಶ್‌, ನಾಗರಾಜ ಚೌಡಣ್ಣನವರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next