Advertisement
ನಾಗರಮುನ್ನೋಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಮಂಗಳವಾರ ರಾತ್ರಿಯಿಂದ ವಿದ್ಯುತ್ ಕಡಿತಗೊಂಡಿದೆ. ಇದರಿಂದ ಆಕ್ರೋಶಗೊಂಡ ರೈತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ರಾಜ್ಯ ಸರಕಾರದ ವಿರುದ್ದ ಹರಿಹಾಯ್ದರು.
ಚಿಕ್ಕೋಡಿ ತಾಲೂಕಿನ ಬೆಳಗಲಿ ಗ್ರಾಮದ ಹದ್ದಿಯಲ್ಲಿ ಕಳೆದ 20 ದಿನಗಳಿಂದ ವಿದ್ಯುತ್ ಪೂರೈಕೆ ಮಾಡಿಲ್ಲ. ತೋಟಪಟ್ಟಿ ಪ್ರದೇಶದ ರೈತರು ವಿದ್ಯುತ್ ಇಲ್ಲದೇ ಕಂಗಾಲಾಗಿದ್ದಾರೆ. ಇದರಿಂದ ಆಕ್ರೊಶಗೊಂಡ ಬೆಳಗಲಿ ರೈತರು ಮಂಗಳವಾರ ಸಂಜೆ ನಾಗರಮುನ್ನೋಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಹೋಗಿದ್ದಾರೆ. ಬುಧವಾರ ಬೆಳಗಿನ ಜಾವ ಜೋಡಕುರಳಿ. ನಾಗರಮುನ್ನೋಳ್ಳಿ ಸೇರಿದಂತೆ ವಿವಿಧ ಗ್ರಾಮದ ರೈತರು ವಿದ್ಯುತ್ ವಿತರಣಾ ಕೇದ್ರಕ್ಕೆ ಆಗಮೀಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಿಜಾಮ ಪೆಂಡಾರಿ.ಶಿವಗೌಡ ಕೊಟೆಪ್ಪಗೋಳ. ಬಾಬಲಾಲ ನುಲ್ತಾನಿ. ಭೀಮಪ್ಪ ಕಗ್ಗನ್ನವರ. ಮಲ್ಳಿಕಾರ್ಜುನ ಆಲೂರೆ. ಲಕ್ಷ್ಮಣ ಹುದ್ದಾರ. ಭೀಮಪ್ಪ ಕಿವಡ. ಜೋಡಕುರಳಿ ಬಸಗೌಡ ಪಾಟೀಲ. ಕಲ್ಲಪ್ಪ ಪಾಶ್ಚಾಪೂರೆ ಮುಂತಾದವರು ಇದ್ದರು.
Related Articles
Advertisement