Advertisement

ಕಾಂಗ್ರೆಸ್ ಟು ಟಿಎಂಸಿ : ದೀದಿ ಸೈನ್ಯಕ್ಕೆ ಅಭಿಜಿತ್ ಮುಖರ್ಜಿ ಜಂಪ್

07:48 PM Jul 05, 2021 | Team Udayavani |

ಕೊಲ್ಕತ್ತಾ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ, ಕಾಂಗ್ರೆಸ್ ನ ಮಾಜಿ ಸಂಸದ ಅಭಿಜಿತ್ ಮುಖರ್ಜಿ ಇಂದು ( ಸೋಮವಾರ, ಜುಲೈ 5) ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.

Advertisement

ಇನ್ನು, ಟಿಎಂಸಿ ಮುಖಂಡ ಸುದೀಪ್‌ ಬಂಡೋಪಾಧ್ಯಾಯ ಅವರು ಅಭಿಜಿತ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಭಿಜಿತ್,  ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಹಿಡಿಯದಂತೆ ತಡೆಯುವಲ್ಲಿ ದೀದಿ ಯಶಸ್ವಿಯಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರು ಅತ್ಯಂತ ವಿಶ್ವಾಸಾರ್ಹ ಜಾತ್ಯತೀತ ನಾಯಕಿ. ದೇಶದಾದ್ಯಂತ ಭವಿಷ್ಯದ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಇದನ್ನೂ ಓದಿ :  ನೋಡುವ‌ ದೃಷ್ಠಿಯಂತೆ ಆನೆ ಕಾಣುತ್ತದೆ : ಯೋಗೇಶ್ವರ್, ಯತ್ನಾಳ್ ವಿರುದ್ಧ ನಿರಾಣಿ ಗುಡುಗು

‘ನನಗೆ ಪಕ್ಷದಲ್ಲಿ ಯಾವುದೇ ಪ್ರಮುಖ ಸ್ಥಾನಮಾನಗಳ ಬಯಕೆ ಇಲ್ಲ. ಪಕ್ಷದಲ್ಲಿ ಕೆಳ ಹಂತದ ಸಾಮಾನ್ಯ ಕಾರ್ಯಕರ್ತನಂತೆಯೇ ಕಾರ್ಯ ನಿರ್ವಹಿಸುತ್ತೇನೆ. ಕಾಂಗ್ರೆಸ್ ನಲ್ಲಿಯೂ ಯಾವುದೇ ಸ್ಥಾನಮಾನಗಳಿರಲಿಲ್ಲ ಎಂದು ಅವು ಹೇಳಿದ್ದಾರೆ.

Advertisement

ಪಶ್ಚಿಮ ಬಂಗಾಳದ ಜಾಂಗಿಪುರ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಟಿಎಂಸಿ ಮುಖಂಡರ ಜೊತೆ ಸಂಪರ್ಕದಲ್ಲಿದ್ದು, ಪಕ್ಷಾಂತರ ಮಾಡುವ ಯೋಚನೆಯಲ್ಲಿದ್ದಾರೆ ಎಂಬ ಚರ್ಚೆ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿತ್ತು.

ಇತ್ತೀಚೆಗಷ್ಟೇ ಕೋಲ್ಕತಾದಲ್ಲಿ ಕೇಳಿ ಬಂದ ನಕಲಿ ಲಸಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಜಿತ್ ಮುಖರ್ಜಿ ಅವರು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.

ಒಂದು ವೇಳೆ ನಕಲಿ ಲಸಿಕೆ ಅಭಿಯಾನದ ವಿಚಾರದಲ್ಲಿ ದೀದಿ ಮಮತಾ ಬ್ಯಾನರ್ಜಿ ಅವರ ಮೇಲೆ ಆರೋಪ ಹೊರಿಸುವುದಾದರೆ, ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿಯಂತಹ ಪ್ರಕರಣಗಳಲ್ಲಿಯೂ ಮೋದಿ ಅವರನ್ನು ದೂಷಿಸಬೇಕಾಗುತ್ತದೆ. ಹೀಗಾಗಿ ಪಶ್ಚಿಮಬಂಗಾಳ ಸರ್ಕಾರದ ವಿರುದ್ಧ ಆರೋಪ ಸರಿಯಲ್ಲ ಎಂದು ಮುಖರ್ಜಿ ಟ್ವೀಟ್ ಮಾಡಿದ್ದರು.

ಈ ಎಲ್ಲಾ ಅಭಿಜಿತ್ ಮುಖರ್ಜಿಯವರ ನಡೆ ಪಕ್ಷಾಂತರದ ಒಲವು ಎಂಬ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ :  ಜಗದ್ಗುರು ಪೀಠಗಳ ಹಂಗಿಲ್ಲದೇ ಪಂಚಮಸಾಲಿ ಮಠಾಧೀಶರ ಒಕ್ಕೂಟ ರಚನೆಗೆ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next