Advertisement

Imran-khan;ಇಮ್ರಾನ್ ಖಾನ್ ದೋಷಿ ಎಂದು ತೀರ್ಪು: 3 ವರ್ಷ ಜೈಲು ಶಿಕ್ಷೆ; ತಕ್ಷಣ ಬಂಧನ

03:47 PM Aug 07, 2023 | Team Udayavani |

ಇಸ್ಲಾಮಾಬಾದ್: ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಇಮ್ರಾನ್ ಖಾನ್ ಅವರನ್ನು ಲಾಹೋರ್ ನಲ್ಲಿ ಬಂಧಿಸಲಾಗಿದೆ.

Advertisement

ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಪಿಟಿಐ (ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ತೋಷಖಾನಾ ಪ್ರಕರಣದಲ್ಲಿ ಭ್ರಷ್ಟ ಆಚರಣೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಹೆಚ್ಚುವರಿಯಾಗಿ, ನ್ಯಾಯಾಲಯವು ಇಮ್ರಾನ್ ಖಾನ್ ಅವರಿಗೆ ಒಂದು ಲಕ್ಷ ರೂ ದಂಡ ವಿಧಿಸಿದೆ.

ನ್ಯಾಯಾಲಯದ ಆದೇಶದ ಸ್ವಲ್ಪ ಸಮಯದ ನಂತರ, ಬಿಗಿ ಭದ್ರತೆಯ ನಡುವೆ ಇಮ್ರಾನ್ ಖಾನ್ ಅವರನ್ನು ಲಾಹೋರ್‌ ನಲ್ಲಿ ಬಂಧಿಸಲಾಯಿತು. ಅಲ್ಲಿಂದ ಅವರನ್ನು ಕೋಟ್ ಲಖ್ಪತ್ ಜೈಲಿಗೆ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ:ರಾಜ್ಯದಲ್ಲಿ ಯಾರು ಏನಂತ ನನಗೆ ಗೊತ್ತಿಲ್ಲವಾ: ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ತಿರುಗೇಟು

ಜೈಲು ಶಿಕ್ಷೆಯ ಕಾರಣ ಇಮ್ರಾನ್ ಖಾನ್ ಅವರು ಐದು ವರ್ಷಗಳ ಅವಧಿಗೆ ರಾಜಕೀಯದಿಂದ ಅನರ್ಹಗೊಂಡಿದ್ದಾರೆ.

Advertisement

ಇಮ್ರಾನ್ ಖಾನ್ ಅವರು ಒಂದು ವೇಳೆ ದಂಡದ ಮೊತ್ತವನ್ನು ಪಾವತಿಸಲು ವಿಫಲರಾದರೆ ಆರು ತಿಂಗಳು ಹೆಚ್ಚುವರಿ ಸೆರೆಮನೆ ವಾಸ ಅನುಭವಿಸಬೇಕು ಎಂದು ಕೋರ್ಟ್ ಹೇಳಿದೆ.

ಪಾಕಿಸ್ಥಾನದ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದ ನಾಯಕನಾಗಿದ್ದ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಪಡೆದ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪ ಸಾಬೀತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next