Advertisement

ನ್ಯೂಜಿಲ್ಯಾಂಡಿನ ಮಾಜಿ ನಾಯಕ ಬಾರ್ರಿ ಸಿಂಕ್ಲೇರ್‌ ನಿಧನ

11:06 PM Jul 11, 2022 | Team Udayavani |

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ತಂಡದ ಮಾಜಿ ನಾಯಕ ಹಾಗೂ ದೇಶದ ಪರ ಒಂದು ಸಾವಿರ ರನ್‌ ಪೂರ್ತಿಗೊಳಿಸಿದ ಮೂರನೇ ಆಟಗಾರರಾಗಿರುವ ಬಾರ್ರಿ ಸಿಂಕ್ಲೇರ್‌ (85) ನಿಧನ ಹೊಂದಿದರು.

Advertisement

1963ರಿಂದ 1968ರ ಅವಧಿಯಲ್ಲಿ ಅವರು 21 ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. ದಕ್ಷಿಣ ಆಫ್ರಿಕಾ, ಪಾಕಿಸ್ಥಾನ ಮತ್ತು ಇಂಗ್ಲೆಂಡ್‌ ವಿರುದ್ಧ ಶತಕ ಸಿಡಿಸಿದ್ದರು. ಮೂರು ಬಾರಿ ದೇಶವನ್ನು ಪ್ರತಿನಿಧಿಸಿದ್ದರು.

ಬಾರ್ರಿ ಸಿಂಕ್ಲೇರ್‌ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಎನ್‌ರkುಡ್‌ಸಿಪಿಎ ಸಂಘದಲ್ಲಿ ಅವರು ಹಲವು ವರ್ಷ ಸೇವೆ ಸಲ್ಲಿಸಿದ್ದರು ಎಂದು ಅಸೋಸಿಯೇಶನ್‌ನ ಸಿಇಒ ಹೀತ್‌ ಮಿಲ್ಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next