Advertisement

ಎನ್ ಸಿಪಿ ತೊರೆದ ತಾರಿಖ್ ಅನ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

11:47 AM Oct 27, 2018 | Team Udayavani |

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ಬೆನ್ನಲ್ಲೇ ರಾಜಕೀಯ ಬೆಳವಣಿಗೆ ಗರಿಗೆದರತೊಡಗಿದ್ದು, ಎನ್ ಸಿಪಿ(ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಮಾಜಿ ಮುಖಂಡ ತಾರಿಖ್ ಅನ್ವರ್ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಶನಿವಾರ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

Advertisement

ಎನ್ ಸಿಪಿ ಸ್ಥಾಪಕರಲ್ಲಿ ಒಬ್ಬರಾಗಿದ್ದ ಅನ್ವರ್ ಮತ್ತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಜೊತೆಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 28ರಂದು ಪಕ್ಷವನ್ನು ತೊರೆದಿದ್ದರು. ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಪವಾರ್ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿ ಮಾತನಾಡಿದ್ದು, ಇದನ್ನು ಅನ್ವರ್ ವಿರೋಧಿಸಿದ್ದರು.

ತದನಂತರ ನೀವು(ಅನ್ವರ್) ರಾಜಕೀಯ ಜೀವನ ಎಲ್ಲಿಂದ ಆರಂಭಿಸಿದ್ದರೋ ಅದೇ ಪಕ್ಷಕ್ಕೆ ಪುನಃ ಸೇರ್ಪಡೆಯಾಗುವುದಾದರೆ ಸ್ವಾಗತಿಸುವುದಾಗಿ ಕಾಂಗ್ರೆಸ್ ಪಕ್ಷ ಪ್ರತಿಕ್ರಿಯೆ ನೀಡಿತ್ತು. 1980ರಲ್ಲಿ ಅನ್ವರ್ ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದರು. ಅಲ್ಲದೇ ಕಾಟಿಹಾರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿ ಸಂಸದರಾಗಿದ್ದರು. 1999ರಲ್ಲಿ ಪವಾರ್ ಹಾಗೂ ಮೇಘಾಲಯದ ದಿ.ಪಿಎ ಸಂಗ್ಮಾ ಜೊತೆಗೂಡಿ ಎನ್ ಸಿಪಿ ಸ್ಥಾಪನೆಯಾಗುವಲ್ಲಿ ಕೈಜೋಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next